ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ನಿಗದಿಯಂತೆ ಸೆಪ್ಟೆಂಬರ್ 7ರಂದು ಚಂದ್ರನ ಅಂಗಳದಲ್ಲಿ ಇಳಿಯಲಿದೆ ಎಂದು ಸಂಸ್ಥೆ ಖಚಿತಪಡಿಸಿದೆ.
ಚಂದ್ರಯಾನ-2 ಸದ್ಯದ ಸ್ಥಿತಿಯ ಕುರಿತಂತೆ ಟ್ವೀಟ್ ಮಾಡಿರುವ ಇಸ್ರೋ, ಇಲ್ಲಿಯಯವರೆಗಿನ ಪ್ರಯಾಣ ಅದ್ಭುತವಾಗಿತ್ತು. ಸೆಪ್ಟಂಬರ್ 7ರಂದು ಚಂದಿರನ ಅಂಗಳದಲ್ಲಿ ಇಳಿಯುವುದು ಖಚಿತ ಎಂದು ಟ್ವೀಟ್ನಲ್ಲಿ ಹೇಳಿದೆ.