ತಿರುಮಲ:ಚಂದ್ರಯಾನ II ಬಾಹ್ಯಾಕಾಶ ನೌಕೆ ಉಡಾವಣೆಗೆ ಕ್ಷಣಗಣನೆ ಶುರುವಾಗಿದೆ. ಉಡ್ಡಯನ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ದೇಶದೆಲ್ಲೆಡೆ ಜನರು ಕುತೂಹಲದಿಂದ ಕಾಯುತ್ತಿದ್ದರೆ, ವಿಜ್ಞಾನ ಜಗತ್ತು ಭಾರತದತ್ತ ದೃಷ್ಟಿ ನೆಟ್ಟಿದೆ. ದೇಶದ ಬಾಹ್ಯಾಕಾಶ ವಿಜ್ಞಾನದ ಅಭಿವೃದ್ದಿಯ ದೃಷ್ಟಿಯಿಂದಲೂ ಈನ ಯೋಜನೆ ಅತ್ಯಂತ ಮಹತ್ವದ್ದಾಗಿದೆ. ಜುಲೈ 15ರಂದು ಸೋಮವಾರ ನಸುಕಿನ ಜಾವ 2:51ಕ್ಕೆ ರಾಕೆಟ್ ಉಡಾವಣೆಯಾಗಲಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ತಿಳಿಸಿದರು.
ಆಂಧ್ರಪ್ರದೇಶದ ತಿರುಪತಿಯ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದ ಬಳಿಕ ಅವರು ಮಾತನಾಡಿದರು. GSLV MK-3 ನೌಕೆ ಆಂಧ್ರದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭೋಮಂಡಲದತ್ತ ಚಿಮ್ಮಲಿದೆ. ಈ ಸಾಧನೆ ಭಾರತೀಯ ಬಾಹಾಕಾಶ್ಯದಲ್ಲಿ ಮಹತ್ವದ ಬದಲಾವಣೆ ತರಲಿದ್ದು, ಇಲ್ಲಿಯವರೆಗೆ ಯಾವುದೇ ರೀತಿಯ ತೊಂದರೆ ಕಾಣಿಸಿಕೊಂಡಿಲ್ಲ ಎಂದು ಹೇಳಿದ್ರು.
ಚಂದ್ರಯಾನ 2 ವಿಶೇಷತೆಗಳೇನು?
- ಚಂದ್ರನ ದಕ್ಷಿಣ ಪೋಲಾರ್ ಪ್ರದೇಶದಲ್ಲಿ ಕಾಲಿಡಲಿರುವ ಮೊದಲ ಬಾಹ್ಯಾಕಾಶ ನೌಕೆ
- ಸಂಪೂರ್ಣ ಸ್ವದೇಶಿ ತಂತ್ರಜ್ಞಾನ ಮೂಲಕ ಚಂದ್ರನ ಅಂಗಳದಲ್ಲಿ ಸಾಫ್ಟ್ ಲ್ಯಾಂಡಿಗ್ ಮಾಡಲಿರುವ ಚೊಚ್ಚಲ ನೌಕೆ
- ಸ್ವದೇಶಿ ತಂತ್ರಜ್ಞಾನದಿಂದ ಚಂದ್ರನ ಮೇಲ್ಮೈಯನ್ನು ಅಧ್ಯಯನ ಮಾಡಲಿರುವ ಮೊದಲ ನೌಕೆ