ಭುವನೇಶ್ವರ್: ಚಂದ್ರಯಾನ- 2 ಯೋಜನೆಯು ನಮಗೆ ದೊಡ್ಡದಾದ ಯಶಸ್ಸು ತಂದುಕೊಟ್ಟಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಮುಖ್ಯಸ್ಥ ಕೆ. ಶಿವನ್ ಸಂತಸ ವ್ಯಕ್ತಪಡಿಸಿದ್ದಾರೆ.
ಚಂದ್ರಯಾನ- 2 ನಮಗೆ ದೊಡ್ಡ ಯಶಸ್ಸು ತಂದುಕೊಟ್ಟಿದೆ: ಕೆ. ಶಿವನ್ ಸಂತಸ - ಆರ್ಬಿಟರ್
ಭುವನೇಶ್ವರದಲ್ಲಿನ ಐಐಟಿಯ 8ನೇ ಸಮಾವೇಶ ಭಾಗವಹಿಸಿ ಮಾತನಾಡಿದ ಅವರು, ಚಂದ್ರಯಾನ- 2 ಯೋಜನೆಯು ಬಹುದೊಡ್ಡ ವಿಜ್ಞಾನ ಪ್ರಯೋಗವಾಗಿದ್ದು, ಚಂದ್ರನ ದಕ್ಷಿಣ ಧ್ರುವ ಮೇಲೆ ಸಾಪ್ಟ್ಲ್ಯಾಂಡಿಂಗ್ ನಿರ್ವಹಣೆ ಒಂದು ಸಣ್ಣ ತಾಂತ್ರಿಕ ಪ್ರದರ್ಶನವಾಗಿತ್ತು. ಅಂತರ್ ಗ್ರಹ ವೈಜ್ಞಾನಿಕ ಯೋಜನೆಕೈಗೊಳ್ಳಲು ನಮ್ಮ ಹೆಚ್ಚಿನ ಉಪಕರಣಗಳು ಕಕ್ಷೆಯಲ್ಲಿವೆ ಎಂದರು.
ಭುವನೇಶ್ವರದಲ್ಲಿನ ಐಐಟಿಯ 8ನೇ ಸಮಾವೇಶ ಭಾಗವಹಿಸಿ ಮಾತನಾಡಿದ ಅವರು, ಚಂದ್ರಯಾನ- 2 ಯೋಜನೆಯು ಬಹುದೊಡ್ಡ ವಿಜ್ಞಾನ ಪ್ರಯೋಗವಾಗಿದ್ದು, ಚಂದ್ರನ ದಕ್ಷಿಣ ಧ್ರುವ ಮೇಲೆ ಸಾಫ್ಟ್ ಲ್ಯಾಂಡಿಂಗ್ ನಿರ್ವಹಣೆ ಒಂದು ಸಣ್ಣ ತಾಂತ್ರಿಕ ಪ್ರದರ್ಶನವಾಗಿತ್ತು. ಅಂತರ್ ಗ್ರಹ ವೈಜ್ಞಾನಿಕ ಯೋಜನೆಕೈಗೊಳ್ಳಲು ನಮ್ಮ ಹೆಚ್ಚಿನ ಉಪಕರಣಗಳು ಕಕ್ಷೆಯಲ್ಲಿವೆ ಎಂದರು.
ಆರ್ಬಿಟರ್ ಜೀವತವಧಿಯನ್ನು ಕೇವಲ ಒಂದು ವರ್ಷಕ್ಕೆಂದು ವಿನ್ಯಾಸಗೊಳಿಸಲಾಗಿತ್ತು. ಆದರೆ, ಸೂಕ್ತವಾದ ಮಿಷನ್ ಕಾರ್ಯಾಚರಣೆಯಿಂದ ಅದರ ಜೀವಿತವಧಿ ಏಳೂವರೆ ವರ್ಷಗಳಗೆ ವಿಸ್ತರಿಸಿದೆ. ಇದರರ್ಥ ವಿಜ್ಞಾನಿಗಳು ನಿರೀಕ್ಷಿಸಿದ ಡೇಟಾಕ್ಕಿಂತ 7.5 ಪಟ್ಟು ಹೆಚ್ಚುಪಡೆಯಲಿದ್ದಾರೆ. ಚಂದ್ರಯಾನ- 2 ನಮ್ಮ ಬಹುದೊಡ್ಡ ಯಶಸ್ಸು. ಇದು ಸಂಪೂರ್ಣ ಚಂದ್ರನ ಮೇಲ್ಮೈಯನ್ನು ನಿಖರವಾಗಿ ತಿಳಿಯಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.