ರಾಯ್ಗಢ (ಚತ್ತೀಸ್ಗಢ): ಇಂಧನ ಟ್ಯಾಂಕ್ ಸ್ಫೋಟಗೊಂಡು ನಾಲ್ವರು ಕಾರ್ಮಿಕರು ಗಾಯಗೊಂಡಿರುವ ಘಟನೆ ಜಿಲ್ಲೆಯ ಉಕ್ಕಿನ ಕಾರ್ಖಾನೆಯೊಂದರಲ್ಲಿ ನಡೆದಿದೆ.
ರಾಯ್ಪುರದಿಂದ 250 ಕಿ.ಮೀ ದೂರದ ಪತ್ರಾಲಪ್ಲಿ ಗ್ರಾಮದ ಜಿಂದಾಲ್ ಸ್ಟೀಲ್ ಮತ್ತು ಪವರ್ ಲಿಮಿಟೆಡ್ನಲ್ಲಿ ಹಳೆಯ ಡೀಸೆಲ್ ಟ್ಯಾಂಕ್ನ್ನು ಗ್ಯಾಸ್ ಕಟ್ಟರ್ ಮೂಲಕ ಕತ್ತರಿಸುವಾಗ ಘಟನೆ ನಡೆದಿದೆ ಎಂದು ಕೋಟ್ರಾ ರಸ್ತೆ ಪೊಲೀಸ್ ಠಾಣೆಯ ಅಧಿಕಾರಿ ಯುವರಾಜ್ ತಿವಾರಿ ಹೇಳಿದ್ದಾರೆ.
ಗ್ಯಾಸ್ ಕಟ್ಟರ್ನಿಂದ ಡೀಸೆಲ್ ಟ್ಯಾಂಕ್ ಕತ್ತರಿಸುವಾಗ ಅದರೊಳಗಿದ್ದ ಅಲ್ಪ ಸ್ವಲ್ಪ ಡೀಸೆಲ್ಗೆ ಬೆಂಕಿ ತಗುಲಿ ಸ್ಫೋಟ ಸಂಭವಿಸಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಘಟನೆಯಲ್ಲಿ ನಾಲ್ವರಿಗೆ ಸುಟ್ಟ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳ ಪೈಕಿ ಇಬ್ಬರನ್ನು ರಾಯ್ಪುರ ಹಾಗೂ ಗಂಭೀರವಾಗಿ ಗಾಯಗೊಂಡ ಇನ್ನಿಬ್ಬರನ್ನು ರಾಯ್ಗಢದ ಆಸ್ಪತ್ರೆಗೆ ದಾಖಲಿಸಲಾಗಿದೆ. ತನಿಖೆಯ ಬಳಿಕವಷ್ಟೆ ಸ್ಪೋಟಕ್ಕೆ ನಿಖರ ಕಾರಣ ತಿಳಿದು ಬರಲಿದೆ.