ನವದೆಹಲಿ: ಕೇಂದ್ರ ಸರ್ಕಾರ ಘೋಷಿಸಿದ 20 ಲಕ್ಷ ಕೋಟಿ ರೂ. ಗಳ ಆರ್ಥಿಕ ಪ್ಯಾಕೇಜ್ನಿಂದಾಗಿ ತಕ್ಷಣದ ವಿತರಣೆ ಮತ್ತು ನೆರವು ನೀಡುವುದು ತುಂಬಾ ಕಷ್ಟ ಹಾಗೂ ಈ ನೆರವಾಗುವ ಪ್ರಮಾಣ ಶೇ.10 ಕ್ಕಿಂತ ಇದು ಕಡಿಮೆ ಇದೆ. ಇದರ ಪ್ರಯೋಜನಗಳು ಸಹ ಸೀಮಿತವಾಗಿರುತ್ತದೆ ಎಂದು ಕೇಂದ್ರ ಹಣಕಾಸು ಮಾಜಿ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಅಭಿಪ್ರಾಯಪಟ್ಟಿದ್ದಾರೆ.
ಈ ಆರ್ಥಿಕ ಪ್ಯಾಕೇಜ್‌ನ ಮೂರು ಪ್ರಮುಖ ಗುರಿಗಳನ್ನು ಹೊಂದಿದೆ. ಮೊದಲು ಆರ್ಥಿಕ ಬೆಳವಣಿಗೆಯು ಪುನಃ ಸುಸ್ಥಿತಿಗೆ ತರುವುದು, ಎರಡನೆಯದು ವ್ಯವಹಾರಗಳನ್ನು ಪುನರುಜ್ಜೀವನಗೊಳಿಸುವುದು ಹಾಗೂ ಮೂರನೆಯದು ಲಾಕ್‌ಡೌನ್‌ನಿಂದಾಗಿ ಹೆಚ್ಚಿನ ಸಂಖ್ಯೆಯ ಜನರು ನಿರುದ್ಯೋಗಿಗಳಾಗಿದ್ದಾರೆ. ಉದ್ಯೋಗ ಕಳೆದುಕೊಂಡ 10 ಕೋಟಿಗೂ ಹೆಚ್ಚು ಜನರಿದ್ದಾರೆ, ಇವರಿಗೆ ಪುನಃ ಉದ್ಯೋಗ ಕಲ್ಪಿಸುವತ್ತ ಪ್ರಯತ್ನಿಸುವುದಾಗಿದೆ ಎಂದು ಗರ್ಗ್ ಅಭಿಪ್ರಾಯಪಟ್ಟಿದ್ದಾರೆ.
ಆರ್ಥಿಕ ಪ್ರಚೋದನೆಯ ಉದ್ದೇಶ ಈ ಮೂರು ಗುರಿಗಳನ್ನು ಸಾಧಿಸುವುದಾಗಿದೆ. ಇದರ ಅಂಶವು ಹಣಕಾಸಿನ ಕಡೆಯಿಂದ ಹೆಚ್ಚು ಆಗಿರಬೇಕು. ಹೆಚ್ಚಿನ ನೆರವು ಸರ್ಕಾರದಿಂದ ಒದಗಿಸಬೇಕಾಗಿತ್ತು. ಹಣಕಾಸಿನ ಅಂಶವು ಚಿಕ್ಕದಾಗಿದ್ದರೆ ದ್ರವ್ಯತೆ ಘಟಕವು ದೊಡ್ಡದಾಗಿದೆ. ಅದು 10 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚಾಗಿದೆ. ಈ ಮೂರು ಉದ್ದೇಶಗಳನ್ನು ಸಾಧಿಸಲು ಇದು ಸಾಕಷ್ಟು ಸಹಾಯ ಮಾಡುತ್ತದೆ ಎಂದು ನಾನು ಭಾವಿಸುವುದಿಲ್ಲ
ಸರ್ಕಾರದ ನೆರವು ಸುಮಾರು ಒಂದೂವರೆಯಿಂದ ಎರಡು ಲಕ್ಷ ಕೋಟಿ ರೂ., ಇದೆ. ಇದು ಯಾವುದಕ್ಕೂ ಸಾಲುವುದಿಲ್ಲ ಎಂದು ಗರ್ಗ್ ಅಭಿಪ್ರಾಯಪಟ್ಟಿದ್ದಾರೆ.
ಲಾಕ್‌ಡೌನ್ 4.0 ದಲ್ಲಿ ನೀಡಲಾದ ವಿಶ್ರಾಂತಿಗಳ ಬಗ್ಗೆ ಮಾತನಾಡಿದ ಅವರು, ಭಾರತದಲ್ಲಿನ ಕೊರೊನಾ ಪ್ರಮಾಣವು ಒಂದು ಲಕ್ಷ ದಾಟಿದೆ, ಹಾಗೂ ಕೊರೊನಾ ಪಾಸಿಟಿವ್ ಪ್ರಕರಣಗಳು ಈಗ ಹೆಚ್ಚಾಗುತ್ತಲೇ ಇವೆ. ಈ ಹಿಂದೆ ಸೋಂಕಿತರು ಇರುವ ಪ್ರದೇಶ ನಗರಗಳಿಂದ ಪ್ರಾರಂಭವಾಗಿತ್ತು, ಆದರೆ ಈಗ ಇವೆರೆಲ್ಲರೂ ಹಳ್ಳಿಗಳಿಗೆ ತೆರಳುತ್ತಿರುವುದರಿಂದ, ಈ ಸೋಂಕು ಎಲ್ಲೆಡೆ ಹಬ್ಬತೊಡಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕೊರೊನಾ ವೈರಸ್ ಬಿಕ್ಕಟ್ಟಿನಿಂದ ಉದ್ಯೋಗ ಕಳೆದುಕೊಂಡಿರುವ ವಲಸೆ ಕಾರ್ಮಿಕರಿಗೆ ಸರ್ಕಾರ ಸಹಾಯ ಮಾಡಬೇಕಿದೆ, ಅವರಿಗೆ ಮಾಸಿಕ 5,000 ರೂ, 7,000 ಅಥವಾ ಕನಿಷ್ಠ 3,000 ರೂಗಳ ನಗದು ನೀಡಿ ಸಹಾಯವನ್ನು ನೀಡಬೇಕಾಗಿತ್ತು. ಅವರ ಡೇಟಾಬೇಸ್ಗಳನ್ನು ಸಿದ್ಧಪಡಿಸುವುದು ಕಷ್ಟವೇನಲ್ಲ. ರೈಲ್ವೆಗಾಗಿ ಡೇಟಾಬೇಸ್ ಸಿದ್ಧಪಡಿಸುತ್ತಿರುವಾಗ ವಲಸಿಗರ ಡೇಟಾಬೇಸ್ ಸಹ ಸಿದ್ಧಪಡಿಸಬಹುದಿತ್ತು ಎಂದು ಅವರು ಹೇಳಿದರು.
ಇನ್ನು ಎಂಎಸ್‌ಎಂಇಗಳಿಗೆ ಅನುದಾನ ಬೇಕು ಎಂದು ಹೇಳಿದ ಗರ್ಗ್, ಎಂಎಸ್‌ಎಂಇಗಳಿಗಾಗಿ ಮೂರು ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಲಾಗಿದೆ, ಕೇವಲ 45 ಲಕ್ಷ ಎಂಎಸ್‌ಎಂಇಗಳು ಮಾತ್ರ ಇದರ ಲಾಭ ಪಡೆಯಲಿವೆ. ಈ ದೇಶದಲ್ಲಿ 7.5 ಕೋಟಿ ಎಂಎಸ್‌ಎಂಇಗಳಿದ್ದು, ಇವುಗಳನ್ನು ಸಹ ನೋಂದಾಯಿಸುವ ಮೂಲಕ ಸಹಾಯ ಮಾಡಲು ಸಾಧ್ಯ, ಅವರನ್ನು ಈ ಪ್ಯಾಕೇಜ್ನಲ್ಲಿ ಸೇರಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.