ನವದೆಹಲಿ:ಕೊರೊನಾ ಲಸಿಕೆ ಪಡೆದ ಜನರು ಆರೋಗ್ಯವಾಗಿದ್ದು, ಯಾವುದೇ ಪ್ರತಿಕೂಲ ಪರಿಣಾಮ ಬೀರಿಲ್ಲ. ನಿಗದಿತ ಶೇ. 97ರಷ್ಟು ಮಂದಿ ಲಸಿಕೆ ವಿತರಣ ಹಂತದಿಂದ ತೃಪ್ತಿ ಹೊಂದಿದ್ದಾರೆ. ಅಲ್ಲದೆ ಕೊರೊನಾ ಲಸಿಕೆಯ ಅಡ್ಡ ಪರಿಣಾಮದಿಂದ ಯಾರೊಬ್ಬರೂ ಸಾವನ್ನಪ್ಪಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಈ ಹಿಂದೆ ಲಸಿಕೆ ಪಡೆದ ಇಬ್ಬರ ಸಾವಿನ ಕುರಿತ ಹೆಚ್ಚಿನ ವಿಚಾರಣೆಯಲ್ಲಿ ಅವರ ಸಾವಿಗೆ ಕೊರೊನಾ ಲಸಿಕೆ ಕಾರಣವಾಗಿಲ್ಲ ಎಂಬುದನ್ನು ಸಮಿತಿ ದೃಢಪಡಿಸಿದೆ. ಇಬ್ಬರೂ ಸಹ ಕೆಲ ಅಂಗಾಂಗ ವೈಫಲ್ಯದಿಂದ ಸಾವನಪ್ಪಿರುವ ಕುರಿತಾಗಿ ರಾಷ್ಟ್ರಮಟ್ಟದ ಎಇಎಫ್ಐ ಕಮಿಟಿ ತನ್ನ ವರದಿರಲ್ಲಿ ತಿಳಿಸಿದೆ. ಇವರಲ್ಲದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಮಾಹಿತಿ ನೀಡಿದೆ.