ಕರ್ನಾಟಕ

karnataka

By

Published : Feb 2, 2021, 5:35 PM IST

ETV Bharat / bharat

ಮೇ 4ರಿಂದ ಜೂನ್​ 11ರವರೆಗೆ ಸಿಬಿಎಸ್​ಇ 10,12ನೇ ತರಗತಿ ಪರೀಕ್ಷೆ

ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ 10 ಹಾಗೂ 12ನೇ ತರಗತಿಯ ಪರೀಕ್ಷಾ ವೇಳಾಪಟ್ಟಿ ಪ್ರಕಟಗೊಳಿಸಿದ್ದು, ಮೇ 4ರಿಂದ ಪರೀಕ್ಷೆಗಳು ಆರಂಭಗೊಳ್ಳಲಿವೆ.

CBSE
CBSE

ನವದೆಹಲಿ:ಸಿಬಿಎಸ್‌ಇ(ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ) ಬೋರ್ಡ್‌ನ 10 ಹಾಗೂ 12ನೇ ತರಗತಿ ಪರೀಕ್ಷೆಗಳು 2021ರ ಮೇ 4ರಿಂದ ಆರಂಭವಾಗಿಲಿದ್ದು, ಜೂನ್‌ 11ರ ವರೆಗೂ ನಡೆಯಲಿವೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ಹೊರಹಾಕಿರುವ ಕೇಂದ್ರ ಶಿಕ್ಷಣ ಇಲಾಖೆ ಮೇ 4ರಿಂದ ಪರೀಕ್ಷೆಗಳು ಆರಂಭಗೊಂಡು ಜೂನ್​ 7ರವರೆಗೆ 10ನೇ ತರಗತಿ ಹಾಗೂ ಜೂನ್​ 11ರವರೆಗೆ 12ನೇ ತರಗತಿ ಪರೀಕ್ಷೆ ನಡೆಯಲಿವೆ ಎಂದಿದ್ದಾರೆ. ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದ ಕಾರಣ ಈ ಪರೀಕ್ಷೆ ಮುಂದೂಡಿಕೆ ಮಾಡಿ ಈ ಹಿಂದೆ ಶಿಕ್ಷಣ ಸಚಿವಾಲಯ ಆದೇಶ ಹೊರಹಾಕಿತ್ತು. ಇದೀಗ ಹೊಸ ವೇಳಾಪಟ್ಟಿ ಪ್ರಕಟಗೊಂಡಿದೆ.

ಓದಿ: ಜನವರಿ - ಫೆಬ್ರವರಿಯಲ್ಲಿ ಸಿಬಿಎಸ್​ಇ ಪರೀಕ್ಷೆ ನಡೆಸುವುದಿಲ್ಲ : ರಮೇಶ್ ಪೋಖ್ರಿಯಾಲ್ ಸ್ಷಷ್ಟನೆ

ಶಾಲೆಗಳು ಮಾರ್ಚ್​ 1ರಿಂದ ಪ್ರಾಯೋಗಿಕ ಪರೀಕ್ಷೆಗಳನ್ನ ನಡೆಸಲಿದೆ ಎಂಬ ಮಾಹಿತಿ ಕೂಡ ಬಹಿರಂಗಗೊಂಡಿದೆ.

ABOUT THE AUTHOR

...view details