ಕರ್ನಾಟಕ

karnataka

By

Published : Nov 10, 2020, 9:38 PM IST

ETV Bharat / bharat

ಹಥ್ರಾಸ್​ ಅತ್ಯಾಚಾರ,ಕೊಲೆ ಪ್ರಕರಣ.. ನವೆಂಬರ್ 25ಕ್ಕೆ ಸಿಬಿಐನಿಂದ ವರದಿ ಸಲ್ಲಿಸುವ ನಿರೀಕ್ಷೆ

ಇದಕ್ಕೂ ಕೆಲವು ದಿನಗಳ ಹಿಂದೆ ಹಥ್ರಾಸ್ ಪ್ರಕರಣದ ತನಿಖೆಗಾಗಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಂದ ರಚಿಸಲ್ಪಟ್ಟಿದ್ದ ವಿಶೇಷ ತನಿಖಾ ದಳ ರಾಜ್ಯ ಸರ್ಕಾರಕ್ಕೆ ವರದಿ ಒಪ್ಪಿಸಿದ್ದು, ಕೆಲ ಮಹತ್ವದ ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಲಾಗಿತ್ತು..

Hathras Case
ಹಥ್ರಾಸ್​ ಪ್ರಕರಣ

ಲಖನೌ (ಉತ್ತರ ಪ್ರದೇಶ):ಹಥ್ರಾಸ್​​ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನವೆಂಬರ್​ 25ರಂದು ತನ್ನ ತನಿಖಾ ವರದಿ ಸಲ್ಲಿಸುವ ನಿರೀಕ್ಷೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಅಲಹಾಬಾದ್ ಹೈಕೋರ್ಟ್​ನ ಲಖನೌ ಪೀಠ ಸಿಬಿಐಗೆ ಹಥ್ರಾಸ್ ತನಿಖೆಯ ಸ್ಥಿತಿಯ ಬಗ್ಗೆ ವರದಿ ಸಲ್ಲಿಸುವಂತೆ ಆದೇಶಿಸಿದ ಕಾರಣದಿಂದ ಸಿಬಿಐ ತನ್ನ ವರದಿಯನ್ನು ಅಲಹಾಬಾದ್ ಹೈಕೋರ್ಟ್​ಗೆ ಸಲ್ಲಿಕೆ ಮಾಡಲಿದೆ.

ಇದಕ್ಕೂ ಕೆಲವು ದಿನಗಳ ಹಿಂದೆ ಹಥ್ರಾಸ್ ಪ್ರಕರಣದ ತನಿಖೆಗಾಗಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಂದ ರಚಿಸಲ್ಪಟ್ಟಿದ್ದ ವಿಶೇಷ ತನಿಖಾ ದಳ ರಾಜ್ಯ ಸರ್ಕಾರಕ್ಕೆ ವರದಿ ಒಪ್ಪಿಸಿದ್ದು, ಕೆಲ ಮಹತ್ವದ ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಲಾಗಿತ್ತು.

ಸಿಎಂ ಯೋಗಿ ಆದಿತ್ಯನಾಥ್ ಅವರಿಂದ ರಚಿಸಲ್ಪಟ್ಟಿದ್ದ ಎಸ್​ಐಟಿಗೆ ಸೆಪ್ಟೆಂಬರ್ 30ರಂದು ತನಿಖೆಗೆ ಆದೇಶಿಸಲಾಗಿತ್ತು. ತನಿಖೆ ಕೈಗೊಂಡ ಎಸ್​ಐಟಿ ಅಕ್ಟೋಬರ್ 7ರಂದು ಕೆಲ ವಿಚಾರಗಳನ್ನು ಬಹಿರಂಗಪಡಿಸಿತ್ತು.

ಸದ್ಯಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಪೊಲೀಸರು ಸಂದೀಪ್ ಸಿಂಗ್, ರವಿ, ರಾಮು ಮತ್ತು ಲವ್ ಕುಶ್​​ ಸಿಕಾರ್ವಾರ್ ಎಂಬ ಆರೋಪಿಗಳನ್ನು ಬಂಧಿಸಿ, ದೆಹಲಿಯ ಅಲಿಪುರ ಜೈಲಿನಲ್ಲಿರಿಸಿದ್ದಾರೆ.

ABOUT THE AUTHOR

...view details