ಇಂದೋರ್: ಉಪಚುನಾವಣೆ ಹಿನ್ನೆಲೆ ಮತದಾರರನ್ನು ಸೆಳೆಯಲು ಅಕ್ರಮವಾಗಿ ಹಣ ವಿತರಿಸಿದ ಆರೋಪದ ಹಿನ್ನೆಲೆ ಸರ್ಪಂಚ್ (ಗ್ರಾಮ ಪಂಚಾಯತ್ ಅಧ್ಯಕ್ಷ)ನ ವಿರುದ್ಧ ಹತೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಜೆಪಿ ವಕ್ತಾರ ಉಮೇಶ್ ಶರ್ಮಾ ಅವರು ಹತೋಡ್ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೇಮ್‌ಚಂದ್ ಗುಡ್ಡು ಅವರ ಬೆಂಬಲಿಗ ಮತ್ತು ಸರ್ಪಂಚ್, ಗೋಪಾಲ್ ಪಂಚಲ್ ಅವರ ವಿರುದ್ಧ ದೂರು ನೀಡಿದ್ದು, ಚುನಾವಣೆ ಹಿನ್ನೆಲೆ ಮತದಾರರನ್ನು ಸೆಳೆಯಲು ಹಣವನ್ನು ವಿತರಿಸಿದ್ದಾರೆ ಎಂದು ಆರೋಪಿಸಿದ್ದಾರೆ.