ಮುಜಫರ್‌ಪುರ್ (ಬಿಹಾರ): ಗುಜರಾತ್‌ನಲ್ಲಿ ಬಿಹಾರ ಮೂಲದ ಕಾರ್ಮಿಕರ ಮೇಲೆ ತಾರತಮ್ಯದ ಹಿನ್ನೆಲೆ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಹಾಗೂ ಬಿಜೆಪಿ ಮುಖಂಡ ಅಲ್ಪೇಶ್ ಠಾಕೂರ್ ವಿರುದ್ಧ ಕಾಂತಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಗುಜರಾತ್ ಸಿಎಂ, ಅಲ್ಪೇಶ್ ಠಾಕೂರ್ ವಿರುದ್ಧ FIR
ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಹಾಗೂ ಬಿಜೆಪಿ ಮುಖಂಡ ಅಲ್ಪೇಶ್ ಠಾಕೂರ್ ವಿರುದ್ಧ ಬಿಹಾರ್ನಲ್ಲಿ ಎಫ್‌ಐಆರ್ ದಾಖಲಾಗಿದೆ.
ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ
ಒಂದು ವರ್ಷದ ಹಿಂದೆ ಮುಜಫರ್ಪುರ್ನ ತಮನ್ನಾ ಹಶ್ಮಿ ಎಂಬ ಸಾಮಾಜಿಕ ಕಾರ್ಯಕರ್ತ ನೀಡಿದ ದೂರಿನ ಆಧಾರದ ಮೇಲೆ, ಕಾಂತಿ ಎಸ್ಹೆಚ್ಒ ಭಾರತೀಯ ದಂಡ ಸಂಹಿತೆಯ 153, 295 ಮತ್ತು 504 ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಜಫರ್‌ಪುರ್ ನ್ಯಾಯಾಲಯಕ್ಕೆ ಪೊಲೀಸರು ಮಾಹಿತಿ ನೀಡಿದ್ದಾರೆ.
2018 ಅಕ್ಟೋಬರ್ 11 ರಂದು ತಮನ್ನಾ ಹಶ್ಮಿ, ಮುಜಫರ್‌ಪುರದ ಎಸಿಜೆಎಂ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.