ಕರ್ನಾಟಕ

karnataka

ETV Bharat / bharat

ಉಗ್ರ ಮಸೂದ್​ನನ್ನು 'ಜೀ' ಎಂದ ರಾಹುಲ್​: ಯುಪಿ ಕೋರ್ಟ್​ನಲ್ಲಿ ದೂರು ದಾಖಲು

ಮಸೂದ್​ ಅಜರ್ ಜೀ ಎಂದು ಕರೆದ ರಾಹುಲ್​ ಗಾಂಧಿ ವಿರುದ್ಧ ಉತ್ತರಪ್ರದೇಶದ ಕೋರ್ಟ್​ನಲ್ಲಿ ದೂರು ದಾಖಲಾಗಿದೆ

ಮಸೂದ್​ ಅಜರ್ ಜೀ ಎಂದು ಕರೆದಿದ್ದಕ್ಕೆ ರಾಹುಲ್​ ಗಾಂಧಿ ವಿರುದ್ಧ ದೂರು ದಾಖಲು

By

Published : Mar 17, 2019, 11:48 AM IST

ಬದೌನ್​ (ಯುಪಿ): ಪುಲ್ವಾಮ ದಾಳಿಯ ಮಾಸ್ಟರ್​ ಮೈಂಡ್​ ಮಸೂದ್​ ಅಜರ್​ನನ್ನು ' ಜೀ' ಎಂದು ಸಂಬೋಧಿಸಿದ ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಉತ್ತರಪ್ರದೇಶದ ಕೋರ್ಟ್​ನಲ್ಲಿ ದೂರು ದಾಖಲಾಗಿದೆ.

ಬದೌನ್​ ಜಿಲ್ಲೆಯ ಸಿಜೆಎಂ ಕೋರ್ಟ್​ನಲ್ಲಿ ಅಡ್ವೊಕೇಟ್​ ದಿವಾಕರ್​ ಶರ್ಮಾ ಎಂಬುವರು ಆರು ಸಹೋದ್ಯೋಗಿಗಳ ಬೆಂಬಲದೊಂದಿಗೆ ದೂರು ದಾಖಲಿಸಿದ್ದಾರೆ. ಮಾರ್ಚ್​ 23ಕ್ಕೆ ದೂರಿನ ಸಂಬಂಧ ವಿಚಾರಣೆ ನಡೆಯಲಿದೆ ಎಂದು ತಿಳಿದುಬಂದಿದೆ.

ನವದೆಹಲಿಯಲ್ಲಿ ನಡೆದ ಸಭೆಯೊಂದರಲ್ಲಿ ಉಗ್ರ ಮಸೂದ್​ನನ್ನು ರಾಹುಲ್ ' ಜೀ' ಎಂದು ಸಂಬೋಧಿಸಿದ್ದು ದೇಶದ ಜನರಿಗೆ ನೋವುಂಟು ಮಾಡಿದೆ ಎಂದು ಅಡ್ವೊಕೇಟ್​ ದಿವಾಕರ್​ ಶರ್ಮಾ ಆರೋಪಿಸಿದ್ದಾರೆ.

ಉಗ್ರ ಮಸೂದ್​ ಪುಲ್ವಾಮ ದಾಳಿಯ ಮಾಸ್ಟರ್​ಮೈಂಡ್​ ಎಂದು ಗೊತ್ತಿದ್ದರೂ ' ಜೀ' ಎಂದು ರಾಹುಲ್​ ಕರೆದಿದ್ದರು. ಕಾಂಗ್ರೆಸ್​ನ ಅಧ್ಯಕ್ಷರು ಮಾತ್ರವಲ್ಲ ಅವರೊಬ್ಬ ಸಂಸದನಾಗಿದ್ದುಕೊಂಡು ಹೀಗೆ ಮಾತನಾಡಬಾರದಿತ್ತು. ದೇಶದ ಜನರು ಅವರ ಮಾತುಗಳನ್ನು ಆಲಿಸುವಾಗ ತಾನೇನು ಮಾತನಾಡುತ್ತಿರುವೆ ಎಂಬುದು ಅವರಿಗೆ ತಿಳಿದಿರಬೇಕು ಎಂದೂ ಕುಟುಕಿದ್ದಾರೆ.

ABOUT THE AUTHOR

...view details