ಕರ್ನಾಟಕ

karnataka

ETV Bharat / bharat

ಚೀನಾಗೆ ಯಾಕ್ ಮೃಗಗಳನ್ನು ಮರಳಿ ನೀಡಿ ನೈತಿಕತೆ ಮೆರೆದ ಭಾರತೀಯ ಸೇನೆ!

ಅರುಣಾಚಲ ಪ್ರದೇಶದ ಬಳಿ ಭಾರತದ ಗಡಿಯೊಳಗೆ ನುಸುಳಿ ಬಂದಿದ್ದ ಯಾಕ್​ ಮೃಗಗಳನ್ನು ಮರಳಿ ಚೀನಾಗೆ ನೀಡಿ ಭಾರತೀಯ ಸೇನೆ ನೈತಿಕತೆ ಮೆರೆದಿದೆ.

returning yaks to Chinese
ಯಾಕ್​ ಮೃಗಗಳನ್ನು ಮರಳಿ ನೀಡಿದ ಸೇನೆ

By

Published : Sep 8, 2020, 7:12 AM IST

ನವದೆಹಲಿ:ಲಡಾಖ್​ನಲ್ಲಿ ಮತ್ತೊಮ್ಮೆ ಪರಿಸ್ಥಿತಿ ಭುಗಿಲೆದ್ದಿದೆ. ಚೀನಾ ಮತ್ತೊಮ್ಮೆ ಕ್ಯಾತೆ ತೆಗೆಯುತ್ತಿದೆ. ಇದರ ಬೆನ್ನಲ್ಲೇ ಅರುಣಾಚಲ ಪ್ರದೇಶದಲ್ಲಿ ಮಾನವೀಯ ಕಾರ್ಯವೊಂದು ಜರುಗಿದೆ. ಭಾರತದ ಗಡಿಯೊಳಗೆ ಬಂದಿದ್ದ 17 ಯಾಕ್​ ಮೃಗಗಳನ್ನು ಚೀನಾಗೆ ಒಪ್ಪಿಸಿ ಭಾರತೀಯ ಸೇನಾ ಸಿಬ್ಬಂದಿ ನೈತಿಕತೆ ಮೆರೆದಿದ್ದಾರೆ.

ಅರುಣಾಚಲ ಪ್ರದೇಶದ ಪೂರ್ವ ಕಾಮೆಂಗ್ ಜಿಲ್ಲೆಯ ಭಾರತ-ಚೀನಾ ಗಡಿಯಲ್ಲಿ ಮೂರು ಮರಿಗಳು ಸೇರಿ 17 ಯಾಕ್​ ಮೃಗಗಳನ್ನು ಚೀನಾಗೆ ಹಸ್ತಾಂತರ ಮಾಡಲಾಗಿದೆ. ಕಳೆದ ವಾರ ಈ ಯಾಕ್​ಗಳು ಅರುಣಾಚಲಕ್ಕೆ ಬಂದಿದ್ದವು.

ಈ ಬಗ್ಗೆ ಟ್ವೀಟ್ ಮಾಡಿರುವ ಭಾರತೀಯ ಸೇನೆ, ಆಗಸ್ಟ್ 31ರಂದು ಎಲ್‌ಎಸಿ ದಾಟಿ ಬಂದಿದ್ದ ಯಾಕ್​ ಮೃಗಗಳನ್ನು ಹಸ್ತಾಂತರ ಮಾಡಲಾಗಿದೆ. ಇದಕ್ಕೆ ಪ್ರತಿಯಾಗಿ ಚೀನಾ ಸೇನೆ ಕೂಡಾ ಸೇನೆಗೆ ಧನ್ಯವಾದ ಹೇಳಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಆಗಸ್ಟ್ 3ರಂದು ಚೀನಾ ಸೇನೆ ಅರುಣಾಚಲ ಪ್ರದೇಶದ ಐವರು ಯುವಕರನ್ನು ಅಪಹರಿಸಿದೆ ಎಂದು ಅರುಣಾಚಲ ಪ್ರದೇಶದ ಸಂಸದ ತಾಪಿರ್ ಗಾವೊ ಆರೋಪಿಸಿದ್ದರು. ಯುವಕರು ಹಿಮಾಲಯದ ಜಿಂಕೆ ಹಾಗೂ ಇತರ ಪ್ರಾಣಿಗಳನ್ನ ಬೇಟೆಯಾಡುವ ತಂಡದ ಸದಸ್ಯರಾಗಿದ್ದಾರೆ ಎಂದು ಹೇಳಲಾಗಿದೆ.

ಚೀನಾ ಸೇನೆ ಈ ಆರೋಪವನ್ನು ನಿರಾಕರಿಸಿದ್ದು, ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿಕೆ ನೀಡಿದೆ. ಇದರ ಬೆನ್ನಲ್ಲೇ ಯಾಕ್​ ಮೃಗಗಳನ್ನು ಭಾರತ ಹಸ್ತಾಂತರ ಮಾಡಿರುವುದು ಸ್ವಲ್ಪ ಮಟ್ಟದಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಶಮನಗೊಳಿಸಿದೆ.

ABOUT THE AUTHOR

...view details