ಕರ್ನಾಟಕ

karnataka

ETV Bharat / bharat

ರಾಜ್ಯ ಉಪಚುನಾವಣೆಗೆ ದಿನಾಂಕ ಮರು ನಿಗದಿ... ಮತ್ತೆ ಪ್ರಕಟಣೆ ಹೊರಡಿಸಿದ ಆಯೋಗ

ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ಮರುನಿಗದಿ ಮಾಡಿ ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದ್ದು, ಹೊಸ ದಿನಾಂಕದ ಪ್ರಕಾರ ಡಿಸೆಂಬರ್​ 5ರಂದು ಮತದಾನ ನಡೆಯಲಿದೆ.

ಚುನಾವಣಾ ಆಯೋಗ

By

Published : Sep 27, 2019, 8:29 PM IST

Updated : Sep 27, 2019, 11:27 PM IST

ಬೆಂಗಳೂರು: ಅನರ್ಹಗೊಂಡಿರುವ ಶಾಸಕರ ವಿಧಾನಸಭಾ ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗದಿಂದ ಉಪಚುನಾವಣೆ ದಿನಾಂಕ ಮರುನಿಗದಿಯಾಗಿದೆ.

ಈಗಾಗಲೇ ಘೋಷಣೆಯಾಗಿದ್ದ ದಿನಾಂಕದ ಪ್ರಕಾರ ಅಕ್ಟೋಬರ್​ 21ರಂದು ಮತದಾನ ನಡೆಯಬೇಕಾಗಿತ್ತು. ಆದರೆ ಸುಪ್ರೀಂಕೋರ್ಟ್​ ಅದಕ್ಕೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದ್ದರಿಂದ ಇಂದು ಚುನಾವಣಾ ಆಯೋಗ ಹೊಸ ದಿನಾಂಕ ಘೋಷಣೆ ಮಾಡಿ ಆದೇಶ ಹೊರಡಿಸಿದೆ.

ಚುನಾವಣಾ ಆಯೋಗದಿಂದ ಹೊಸ ದಿನಾಂಕ ಘೋಷಣೆ

ಹೊಸ ದಿನಾಂಕದ ಪ್ರಕಾರ ಡಿಸೆಂಬರ್​ 5ರಂದು 15 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆ ಮಾಡಲು ನವೆಂಬರ್​ 18ರಂದು ಕೊನೆಯ ದಿನವಾಗಿದೆ. ನ.19 ನಾಮಪತ್ರ ಪರಿಶೀಲನೆ ಹಾಗೂ 21ರಂದು ನಾಪಪತ್ರ ಹಿಂಪಡೆದುಕೊಳ್ಳಬಹುದಾಗಿದೆ. ಇನ್ನು ಡಿಸೆಂಬರ್​ 09ರಂದು ಚುನಾವಣೆಯ ಫಲಿತಾಂಶ ಹೊರಬೀಳಲಿದೆ.

ರಾಜ್ಯ ಉಪಚುನಾವಣೆಗೆ ದಿನಾಂಕ ಮರು ನಿಗದಿ

ನ.11ರಿಂದಲೇ ಉಪ ಚುನಾವಣೆಗೆ ನೀತಿ ಸಂಹಿತಿ ಜಾರಿಗೆ ಬರಲಿದೆ. ನಾಮಪತ್ರ ಸಲ್ಲಿಕೆ ಆರಂಭವಾಗುವ ದಿನಾಂಕದಿಂದ ನೀತಿ ಸಂಹಿತೆ ಜಾರಿಯಲ್ಲಿ ಇರುತ್ತದೆ. ಚುನಾವಣೆ ಪ್ರಕ್ರಿಯೆ ಅಂತ್ಯಗೊಳ್ಳುವ ಡಿಸೆಂಬರ್ 11 ರಂದು ಮಾದರಿ ನೀತಿ ಸಂಹಿತೆ ಮುಕ್ತಾಯವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಹಳೆ ಉಪ ಚುನಾವಣೆ ವೇಳಾಪಟ್ಟಿ ಪ್ರಕಾರ ಈಗಾಗಲೇ ಜಾರಿಯಲ್ಲಿದ್ದ ನೀತಿ ಸಂಹಿತೆಯನ್ನು ಅಮಾನತ್ತು ಮಾಡಲಾಗಿದೆ ಎಂದು ಕೇಂದ್ರ ಚುನಾವಣೆ ಆಯೋಗ ತನ್ನ ಸ್ಪಷ್ಟನೆಯಲ್ಲಿ ತಿಳಿಸಿದೆ.

ನ.11ರಿಂದ ನೀತಿ ಸಂಹಿತೆ ಜಾರಿ
Last Updated : Sep 27, 2019, 11:27 PM IST

ABOUT THE AUTHOR

...view details