ಒಡಿಶಾ:ವಲಸೆ ಕಾರ್ಮಿಕರನ್ನು ಹೊತ್ತು ಗುಜರಾತ್ನ ಸೂರತ್ನಿಂದ ಒಡಿಶಾಕ್ಕೆ ಪ್ರಯಾಣ ಬೆಳೆಸಿದ್ದ ಬಸ್ ಅಪಘಾತಕ್ಕೀಡಾದ ಪರಿಣಾಮ ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ.
ವಲಸೆ ಕಾರ್ಮಿಕರ ಹೊತ್ತೊಯ್ಯುತ್ತಿದ್ದ ಬಸ್ ಅಪಘಾತ: ಓರ್ವ ಸಾವು, ಹಲವರಿಗೆ ಗಾಯ - ಗುಜರಾತ್ನ ಸೂರತ್ನಿಂದ ಒಡಿಶಾ
ವಿವಿಧ ರಾಜ್ಯಗಳಲ್ಲಿ ಉಳಿದುಕೊಂಡಿರುವ ವಲಸೆ ಕಾರ್ಮಿಕರು ತಮ್ಮ ತಮ್ಮ ರಾಜ್ಯಗಳಿಗೆ ಹೋಗಲು ಕೇಂದ್ರ ಸರ್ಕಾರ ಈಗಾಗಲೇ ಅನುಮತಿ ನೀಡಿದೆ. ಅದರಂತೆ ಬಸ್, ಟ್ರೈನ್ಗಳ ಮೂಲಕ ಕಾರ್ಮಿಕರು ಭಾರಿ ಸಂಖ್ಯೆಯಲ್ಲಿ ತವರು ರಾಜ್ಯಗಳತ್ತ ಧಾವಿಸುತ್ತಿದ್ದಾರೆ.
Bus accident in Kalinga Ghat Odisha
ವಲಸೆ ಕಾರ್ಮಿಕರನ್ನು ಹೊತ್ತು ಸಾಗುತ್ತಿದ್ದ ವೇಳೆ ಗಂಜಾಮ್- ಕಂದಮಾಲ್ ಗಡಿಯಲ್ಲಿನ ಕಳಿಂಗಾ ಘಾಟ್ನಲ್ಲಿ ಬಸ್ ಆಯತಪ್ಪಿ ಉರುಳಿ ಬಿದ್ದಿದೆ. ಪರಿಣಾಮ ಓರ್ವ ಪ್ರಯಾಣಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಉಳಿದಂತೆ ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟು 40 ಕಾರ್ಮಿಕರ ರಕ್ಷಣೆ ಮಾಡಲಾಗಿದೆ ಎಂದು ಒಡಿಶಾ ದಕ್ಷಿಣ ವಲಯದ ಡಿಐಜಿ ಸತ್ಯಬಾರ್ತ್ ಬೋಯ್ ತಿಳಿಸಿದ್ದಾರೆ.
Last Updated : May 3, 2020, 9:59 AM IST