ಕರ್ನಾಟಕ

karnataka

ETV Bharat / bharat

ಮುಂಬೈನಲ್ಲಿ ಕಟ್ಟಡ ಕುಸಿತ ಪ್ರಕರಣ: ಸಾವಿನ ಸಂಖ್ಯೆ 14ಕ್ಕೆ ಏರಿಕೆ

ಮುಂಬೈನ ಡೊಂಗ್ರಿಸ್ಪಾಟ್​ನ​ಲ್ಲಿ ಸಂಭವಿಸಿದ್ದ ಕಟ್ಟಡ ಕುಸಿತದಿಂದ 14 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಸಾವಿನ ಸಂಖ್ಯೆ 13ಕ್ಕೆ ಏರಿಕೆ

By

Published : Jul 17, 2019, 7:42 AM IST

Updated : Jul 17, 2019, 8:18 AM IST

ಮುಂಬೈ: ಇಲ್ಲಿನ ಡೊಂಗ್ರಿಸ್ಪಾಟ್​ನ​ಲ್ಲಿ ನಿನ್ನೆ ಸಂಭವಿಸಿದ್ದ ನೂರು ವರ್ಷದಷ್ಟು ಹಳೆಯ 4 ಅಂತಸ್ತಿನ ಕಟ್ಟಡ ಕುಸಿತದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ರಕ್ಷಣಾ ತಂಡಗಳು 8 ಜನರನ್ನು ಬಚಾವ್ ಮಾಡಿದ್ದು, ಕಾರ್ಯಾಚರಣೆ ಮುಂದುವರೆದಿದೆ.

ನಿನ್ನೆ ಬೆಳಗ್ಗೆ 11 ಗಂಟೆ 40 ನಿಮಿಷದ ಸುಮಾರಿಗೆ ಈ ದುರ್ಘಟನೆ ನಡೆದಿತ್ತು. ಅವಶೇಷಗಳಡಿಯಲ್ಲಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್‌ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಕಾರ್ಯಾಚರಣೆಯಲ್ಲಿ ತೊಡಗಿವೆ. ಈ ಕಟ್ಟಡದಲ್ಲಿ 14ರಿಂದ 15 ಕುಟುಂಬಗಳು ವಾಸವಾಗಿದ್ದವು ಎಂದು ತಿಳಿದು ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಸೂಕ್ತ ತನಿಖೆಗೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್​ ಆದೇಶ ನೀಡಿದ್ದಾರೆ.

Last Updated : Jul 17, 2019, 8:18 AM IST

ABOUT THE AUTHOR

...view details