ಕರ್ನಾಟಕ

karnataka

ETV Bharat / bharat

ಆನೆ - ಸೈಕಲ್​ ಸಂಬಂಧ ದೂರ.. ದೂರ... ಎಸ್​​ಪಿ ಜತೆ ಮೈತ್ರಿ ಮುರಿದುಕೊಂಡ ಮಾಯಾವತಿ! - ಬಿಎಸ್ಪಿ

ಬಿಜೆಪಿ ವಿರುದ್ಧ ರಣತಂತ್ರ ಹೆಣೆದು ಲೋಕಸಭಾ ಚುನಾವಣೆಗಾಗಿ ಮೈತ್ರಿ ಮಾಡಿಕೊಂಡಿದ್ದ ಬಿಎಸ್ಪಿ ಹಾಗೂ ಎಸ್​ಪಿ ಇದೀಗ ತಮ್ಮ ನಡುವಿನ ಸಂಬಂಧ ಮುರಿದುಕೊಳ್ಳಲು ಮುಂದಾಗಿವೆ.

ಮಯಾವತಿ,ಅಖಿಲೇಶ್​​

By

Published : Jun 24, 2019, 5:05 PM IST

ಲಖನೌ: ಲೋಕಸಭಾ ಚುನಾವಣೆ ಗೆಲುವಿಗಾಗಿ ರಣತಂತ್ರ ರೂಪಿಸಿ ಒಂದಾಗಿದ್ದ ಮಾಯಾವತಿಯ ಬಹುಜನ ಸಮಾಜವಾದಿ ಪಕ್ಷ ಹಾಗೂ ಅಖಿಲೇಶ್​ ಯಾದವ್​​ ನೇತೃತ್ವದ ಸಮಾಜವಾದಿ ಪಕ್ಷ ಇದೀಗ ತಮ್ಮ ನಡುವಿನ ಮೈತ್ರಿ ಮುರಿದುಕೊಳ್ಳಲು ಮುಂದಾಗಿವೆ.

ಲೋಕಸಭಾ ಚುನಾವಣೆಗಾಗಿ ಈ ಎರಡು ಪಕ್ಷಗಳು ಒಂದಾಗಿ ಹೋರಾಟ ನಡೆಸಿದ್ದರೂ 80 ಕ್ಷೇತ್ರಗಳಲ್ಲಿ ಬಿಜೆಪಿ 62 ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಿತ್ತು. ಹೀಗಾಗಿ ಎರಡು ಪಕ್ಷಗಳ ನಡುವೆ ಇದೀಗ ವೈಮನಸ್ಸು ಉಂಟಾಗಿದೆ ಎಂದು ತಿಳಿದು ಬಂದಿದೆ. ಈ ಸಲದ ಎಸ್​​ಪಿ ಹಾಗೂ ಬಿಎಸ್ಪಿ ಕ್ರಮವಾಗಿ 38 ಹಾಗೂ 37 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದವು.

ನಿನ್ನೆ ತಡರಾತ್ರಿಯವರಿಗೆ ಬಿಎಸ್ಪಿ ಸಭೆ ನಡೆಸಿತ್ತು. ಆ ಬಳಿಕ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾಯಾವತಿ ಸರಣಿ ಟ್ವೀಟ್​ ಮಾಡಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿ ಏಕಾಂಗಿಯಾಗಿ ಹೋರಾಟ ನಡೆಸಲಿದ್ದು, ಪಕ್ಷದ ಹಿತದೃಷ್ಠಿಯಿಂದ ಮೈತ್ರಿ ಮರಿದುಕೊಂಡಿರುವುದಾಗಿ ಹೇಳಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿ ಶೂನ್ಯ ಸಂಪಾದನೆ ಮಾಡಿದ್ದ ಬಿಎಸ್ಪಿ ಈ ಸಲ 10 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿತ್ತು.

ABOUT THE AUTHOR

...view details