ಹೈದರಾಬಾದ್: 'ಈಟಿವಿ ಭಾರತ' ಸುಖಿಭವದೊಂದಿಗೆ ಮಾತನಾಡಿದ ಡಾ. ಪಿ.ರಘು ರಾಮ್ ಸ್ತನ ಕ್ಯಾನ್ಸರ್ ಕುರಿತು ಮಾಹಿತಿ ನೀಡಿದ್ದಾರೆ. ಸ್ತನ ಕ್ಯಾನ್ಸರ್ ಎಂದರೇನು ಮತ್ತು ಅದು ಎಲ್ಲಿ ಉದ್ಭವಿಸುತ್ತದೆ, ಕ್ಯಾನ್ಸರ್ ಹಂತ ಮತ್ತು ದರ್ಜೆಯ ನಡುವಿನ ವ್ಯತ್ಯಾಸವೇನು ಎಂಬ ಅಂಶಗಳ ಬಗ್ಗೆ ತಿಳಿಸಿದ್ದಾರೆ.
ಪ್ರಶ್ನೆ 1 -ಸ್ತನ ಕ್ಯಾನ್ಸರ್ ಎಂದರೇನು ಮತ್ತು ಅದು ಎಲ್ಲಿ ಉದ್ಭವಿಸುತ್ತದೆ?
ಉತ್ತರ - ಸ್ತನ ಅಂಗಾಂಶವು ನಾಳಗಳು ಮತ್ತು ಲೋಬ್ಯುಲ್‌ಗಳಿಂದ ಕೂಡಿದೆ. ಸ್ತನದಲ್ಲಿನ ಒಂದು ಕೋಶವು ವಿಭಜನೆಗೊಳ್ಳಲು ಮತ್ತು ಅಸಹಜ ರೀತಿಯಲ್ಲಿ ಬೆಳೆಯಲು ಪ್ರಾರಂಭಿಸಿದಾಗ ಸ್ತನ ಕ್ಯಾನ್ಸರ್ ಸಂಭವಿಸುತ್ತದೆ.
ಸ್ತನ ಕ್ಯಾನ್ಸರ್ನಲ್ಲಿ ವಿಧಗಳಿವೆ. ಇದನ್ನು ಕಾರ್ಸಿನೋಮ ಎಂದೂ ಕರೆಯುತ್ತಾರೆ. ನಾಳಗಳಿಂದ ಉಂಟಾಗುವ ಸ್ತನ ಕ್ಯಾನ್ಸರ್ ಅನ್ನು ಡಕ್ಟಲ್ ಕಾರ್ಸಿನೋಮ (ಸ್ತನ ಕ್ಯಾನ್ಸರ್ನ ಸಾಮಾನ್ಯ ರೂಪ) ಎಂದು ಕರೆಯಲಾಗುತ್ತದೆ ಮತ್ತು ಲೋಬ್ಯುಲ್‌ಗಳಿಂದ ಉಂಟಾಗುವ ಕ್ಯಾನ್ಸರ್ ಅನ್ನು ಲೋಬ್ಯುಲರ್ ಕಾರ್ಸಿನೋಮ ಎಂದು ಕರೆಯಲಾಗುತ್ತದೆ.
ಪ್ರಶ್ನೆ 2 - ಕ್ಯಾನ್ಸರ್ ಹಂತ ಮತ್ತು ದರ್ಜೆಯ ನಡುವಿನ ವ್ಯತ್ಯಾಸವೇನು?
ಉತ್ತರ - ಕ್ಯಾನ್ಸರ್ ಹರಡುವ ಸಾಮರ್ಥ್ಯವನ್ನು ಕ್ಯಾನ್ಸರ್ನ ಗ್ರೇಡ್ ಎಂದು ಕರೆಯಲಾಗುತ್ತದೆ. ಸ್ತನ ಕ್ಯಾನ್ಸರ್ ಅನ್ನು 1, 2 ಅಥವಾ 3 ಹಂತದಲ್ಲಿ ವರ್ಗೀಕರಿಸಲಾಗಿದೆ. ಸಾಮಾನ್ಯವಾಗಿ ಕಡಿಮೆ ದರ್ಜೆಯ (ಗ್ರೇಡ್ 1) ನಿಧಾನವಾಗಿ ಬೆಳೆಯುತ್ತಿರುವ ಕ್ಯಾನ್ಸರ್ ಅನ್ನು ಸೂಚಿಸುತ್ತದೆ ಮತ್ತು ಹೆಚ್ಚಿನ ಗ್ರೇಡ್ (ಗ್ರೇಡ್ 3) ವೇಗವಾಗಿ ಬೆಳೆಯುತ್ತಿರುವ ಕ್ಯಾನ್ಸರ್ ಅನ್ನು ಸೂಚಿಸುತ್ತದೆ. ಕ್ಯಾನ್ಸರ್ ಹರಡುವಿಕೆಯ ವ್ಯಾಪ್ತಿಯನ್ನು ರೋಗದ ಹಂತ ಎಂದು ಕರೆಯಲಾಗುತ್ತದೆ.
- ಹಂತ 1: ಗೆಡ್ಡೆ 2 ಸೆಂ.ಮೀ. ಗಿಂತ ಕಡಿಮೆ, ಇದು ಹರಡುವುದಿಲ್ಲ
- ಹಂತ 2: ಗೆಡ್ಡೆ 2 - 5 ಸೆಂ.ಮೀ, ಲಿಂಫ್ ನೋಡ್ನ್ನು ಒಳಗೊಂಡಿರಬಹುದು ಅಥವಾ ಇಲ್ಲ, ದೇಹದ ಇತರ ಭಾಗಗಳಿಗೆ ಹರಡುವುದಿಲ್ಲ
- ಹಂತ 3: ಗೆಡ್ಡೆ 5 ಸೆಂ.ಮೀ ಗಿಂತ ಹೆಚ್ಚು ಅಥವಾ ಯಾವುದೇ ಗಾತ್ರದಲ್ಲಿರಬಹುದು. ಸ್ತನ ಗೋಡೆ, ಸ್ನಾಯು ಅಥವಾ ಚರ್ಮಕ್ಕೆ ಹೊಂದಿಕೊಂಡಿರುತ್ತದೆ
- ಹಂತ 4: ಗೆಡ್ಡೆ ಯಾವುದೇ ಗಾತ್ರ, ಲಿಂಫ್ ನೋಡ್ ಒಳಗೊಂಡಿರಬಹುದು ಅಥವಾ ಇಲ್ಲದಿರಬಹುದು. ಆದರೆ ಕ್ಯಾನ್ಸರ್ ದೇಹದ ಇತರ ಭಾಗಗಳಿಗೆ ಹರಡಬಹುದು
(ಮೂಲ: ಕ್ಯಾನ್ಸರ್ ವಿರುದ್ಧ ಅಂತಾರಾಷ್ಟ್ರೀಯ ಒಕ್ಕೂಟ - ಯುಐಸಿಸಿ)