ಕರ್ನಾಟಕ

karnataka

ETV Bharat / bharat

ಮನುಷ್ಯತ್ವ ಎಂಬುದೇ ಇಲ್ವಾ... ಮಗುವಿನ ಮೇಲೆ ರಾಕ್ಷಸಿ ಕೃತ್ಯ! - ಬಾಲಕನ ಮೇಲೆ ಅಮಾನವೀಯ ಹಲ್ಲೆ

ಬಾಲಕನೊಬ್ಬನ ಮೇಲೆ ಅಪಾರ್ಟ್​​ಮೆಂಟ್​​ನಲ್ಲಿ ವ್ಯಕ್ತಿ ರಾಕ್ಷಸಿ ಕೃತ್ಯ ಮೆರೆದಿದ್ದು, ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ.

ಮಗುವಿನ ಮೇಲೆ ರಾಕ್ಷಸಿ ಹಲ್ಲೆ

By

Published : Nov 11, 2019, 3:33 PM IST

ಸಿಕಂದರಾಬಾದ್​​: ಇಲ್ಲಿನ ಗೋಲ್ಡನ್ ಅಪಾರ್ಟ್​​ಮೆಂಟ್​​ನ ನೆಲಮಹಡಿಯಲ್ಲಿ ಬಾಕನೋರ್ವನ ಮೇಲೆ ವ್ಯಕ್ತಿ ಅಮಾನವೀಯವಾಗಿ ಥಳಿಸಿರುವ ಘಟನೆ ನಡೆದಿದ್ದು, ಇದೀಗ ಅದರ ವಿಡಿಯೋ ವೈರಲ್ ಆಗಿದೆ.

ಅದೇ ಅಪಾರ್ಟ್​​ಮೆಂಟ್​​ನಲ್ಲಿ ವಾಸವಾಗಿದ್ದ ಲಾರಿ ಚಾಲಕ ಕೀರ್ತಿ ಸ್ವರೂಪ್​ ಈ ಹಲ್ಲೆ ನಡೆಸಿದ್ದು, ಜಯಂತ್​ ಎಂಬ ಬಾಲಕ ಹಲ್ಲೆಗೊಳಗಾಗಿದ್ದಾನೆ.

ಮಗುವಿನ ಮೇಲೆ ರಾಕ್ಷಸಿ ಹಲ್ಲೆ

ಘಟನೆಗೆ ಕಾರಣ!? ಸ್ವರೂಪ ಅಪಾರ್ಟ್​​ಮೆಂಟ್​​ನ ಮುಂದುಗಡೆ ಲಾರಿ ಚಾಲಕನ ಮಗನೊಂದಿಗೆ ಆಟವಾಡುತ್ತಿದ್ದನು. ಇದೇ ಘಟನೆ ಲಾರಿ ಚಾಲಕ ಕೀರ್ತಿ ಆಕ್ರೋಶಕ್ಕೆ ಕಾರಣವಾಗಿದ್ದು, ಜಯಂತ್​ ಸೈಕಲ್​ ನಿಲ್ಲಿಸಲು ತೆರಳುತ್ತಿದ್ದಂತೆ ಆತನ ಹಿಂದೆ ಹೋಗಿ ರಾಕ್ಷಸಿ ಕೃತ್ಯವೆಸಗಿದ್ದಾನೆ.

ಬಾಲಕನ ಮೇಲೆ ಹಲ್ಲೆ ನಡೆಯುತ್ತಿರುವುದನ್ನ ವೀಕ್ಷಣೆ ಮಾಡಿರುವ ವಾಚ್​​ಮ್ಯಾನ್​ ತಕ್ಷಣವೇ ನಿಲ್ಲಿಸಿದ್ದಾನೆ. ಇದರ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನ ತಂದೆ ದೂರು ದಾಖಲು ಮಾಡಿದ್ರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಅವರು ತಮ್ಮ ಅಳಲು ತೊಡಿಕೊಂಡಿದ್ದಾರೆ.

ABOUT THE AUTHOR

...view details