ಕರ್ನಾಟಕ

karnataka

ETV Bharat / bharat

ಬೊಂಬಾರ್ಡಿಯರ್ ಚಾಲೆಂಜರ್ 601 ವಿಮಾನ ಪತನ: 13 ಪ್ರಯಾಣಿಕರು ಸಾವು

ಬೊಂಬಾರ್ಡಿಯರ್ ಚಾಲೆಂಜರ್ 601 ವಿಮಾನದ ಅವಶೇಷಗಳು ಪತ್ತೆಯಾಗಿದ್ದು, ವಿಮಾನದಲ್ಲಿದ್ದ 13 ಮಂದಿ ಪ್ರಯಾಣಿಕರು ಸಾವಿಗೀಡಾಗಿದ್ದಾರೆ.

By

Published : May 7, 2019, 8:08 AM IST

ಬೊಂಬಾರ್ಡಿಯರ್ ಚಾಲೆಂಜರ್ 601 ವಿಮಾನ

ಮೆಕ್ಸಿಕೋ:ಅಮೆರಿಕದ ಲಾಸ್‌ವೆಗಾಸ್‌ನಿಂದ ಉತ್ತರ ಮೆಕ್ಸಿಕೋದ ಮಾಂಟೆರೆಗೆ ತೆರಳುತ್ತಿದ್ದ ಖಾಸಗಿ ವಿಮಾನ ಪತನವಾಗಿದ್ದು, ಅದರ ಅವಶೇಷಗಳು ಸೋಮವಾರ ಪತ್ತೆಯಾಗಿವೆ. ದುರಂತದಲ್ಲಿ 13 ಮಂದಿ ಮೃತಪಟ್ಟಿದ್ದಾರೆ.

ಬೊಂಬಾರ್ಡಿಯರ್ ಚಾಲೆಂಜರ್ 601 ವಿಮಾನದ ಅವಶೇಷಗಳು ಮೆಕ್ಸಿಕೋದಲ್ಲಿ ಪತ್ತೆಯಾಗಿದ್ದು, ಈ ವಿಮಾನದಲ್ಲಿ ಸಿಬ್ಬಂದಿ ಸೇರಿ ಒಟ್ಟು 13 ಮಂದಿ ಪ್ರಯಾಣಿಸುತ್ತಿದ್ದರು ಎಂದು ಮೆಕ್ಸಿಕೋದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಮೆಕ್ಸಿಕೋದ ಮಾಧ್ಯಮಗಳ ವರದಿ ಪ್ರಕಾರ, ಕಳೆದ ಶನಿವಾರ ರಾತ್ರಿ ಲಾಸ್‌ ವೆಗಾಸ್‌ನಲ್ಲಿ ನಡೆದ ಕುಸ್ತಿ ಪಂದ್ಯಾವಳಿ ಮುಗಿಸಿ ಹಿಂತಿರುಗುತ್ತಿದ್ದವರು ಆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ABOUT THE AUTHOR

...view details