ಕರ್ನಾಟಕ

karnataka

ETV Bharat / bharat

ಚುನಾವಣೆಗೆ ಸ್ಪರ್ಧಿಸದಂತೆ ಜೋಶಿಗೆ ಸೂಚನೆ:  ಹಿರಿಯ ನಾಯಕರಿಗೆ ಬಿಜೆಪಿ ದಿಗ್ಬಂಧನ ವಿಧಿಸಿದ್ದೇಕೆ? - ಬಿಜೆಪಿ

ಚುನಾವಣೆಗೆ ಸ್ಪರ್ಧಿಸದಂತೆ ಬಿಜೆಪಿ ಸೂಚಿಸಿದೆ ಎಂದು ಮುರುಳಿ ಮನೋಹರ್​ ಜೋಶಿ ಹೇಳಿದ್ದಾರೆ

ಮುರುಳಿ ಮನೋಹರ್​ ಜೋಶಿ ಅವರಿಗೆ ಚುನಾವಣೆಗೆ ಸ್ಪರ್ಧಿಸದಂತೆ ಸೂಚಿಸಿದ ಬಿಜೆಪಿ

By

Published : Mar 26, 2019, 2:11 PM IST

ನವದೆಹಲಿ:ಹಿರಿಯ ನಾಯಕರನ್ನು ಬಿಜೆಪಿ ಲೋಕಸಭೆ ಕಣದಿಂದ ದೂರವಿಟ್ಟಿದೆ ಎಂಬ ಮಾತಿಗೆ ಪೂರಕವಾಗಿ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಬಿಜೆಪಿ ವರಿಷ್ಠ ಮುರುಳಿ ಮನೋಹರ್​ ಜೋಶಿ ಅವರಿಗೆ ಚುನಾವಣೆಗೆ ಸ್ಪರ್ಧಿಸದಂತೆ ಬಿಜೆಪಿ ಕಾರ್ಯದರ್ಶಿ ಸೂಚಿಸಿದ್ದಾಗಿ ತಿಳಿದುಬಂದಿದೆ.

ತಮ್ಮ ಕ್ಷೇತ್ರ ಕಾನ್ಪುರದ ಜನರಿಗೆ ಬರೆದ ಪತ್ರದಲ್ಲಿ ಈ ಬಗ್ಗೆ ಸ್ವತಃ ಜೋಶಿ ಅವರೇ ಹೇಳಿಕೊಂಡಿದ್ದಾರೆ. ' ಕಾನ್ಪುರದ ಪ್ರಿಯ ಮತದಾರರೆ, ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿ ಶ್ರೀ ರಾಮಲಾಲ್​ ಅವರು ನನಗೆ ಕಾನ್ಪುರ ಸೇರಿ ಎಲ್ಲಿಯೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸದಂತೆ ಸೂಚಿಸಿದ್ದಾರೆ' ಎಂದು ಹೇಳಿಕೊಂಡಿದ್ದಾರೆ.

75 ವರ್ಷಕ್ಕೂ ಮೇಲ್ಪಟ್ಟ ನಾಯಕರಿಗೆ ಟಿಕೆಟ್​ ನಿರಾಕರಿಸುವ ಪಕ್ಷದ ನಿರ್ಧಾರದಂತೆ, 85 ವರ್ಷದ ಜೋಶಿ ಅವರಿಗೂ ಈ ರೀತಿ ಸೂಚಿಸಲಾಗಿದೆ ಎಂದು ಹೇಳಲಾಗ್ತಿದೆ.

ಕೇಂದ್ರ ಸಚಿವರು, ಬಿಜೆಪಿ ಅಧ್ಯಕ್ಷರೂ ಆಗಿದ್ದ ಜೋಶಿ, 2014ರ ಚುನಾವಣೆಯಲ್ಲಿ ಮೋದಿಗಾಗಿ ತಮ್ಮ ಕ್ಷೇತ್ರ ವಾರಣಾಸಿಯನ್ನು ಬಿಟ್ಟುಕೊಟ್ಟು, ಕಾನ್ಪುರದಿಂದ ಸ್ಪರ್ಧಿಸಿದ್ದರು. ಇವರೊಟ್ಟಿಗೆ ಅಡ್ವಾಣಿ, ಕಲ್​ರಾಜ್​ ಮಿಶ್ರಾ, ಶಾಂತಕುಮಾರ್​ ಹಾಗೂ ಕರಿಯಾ ಮುಂಡಾ ಅವರಿಗೂ ಈ ಬಾರಿಯ ಚುನಾವಣೆಗೆ ಸ್ಪರ್ಧಿಸದಂತೆ ರಾಮ್​ಲಾಲ್​ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಬಿಜೆಪಿ ಹಿರಿಯ ನಾಯಕ ಎಲ್​.ಕೆ. ಅಡ್ವಾಣಿ ಅವರನ್ನು ಪಕ್ಷದಿಂದ ದೂರ ಇರಿಸಿದೆ ಎಂದು ಆರೋಪಿಸಲಾಗುತ್ತಿತ್ತು. ಇದೀಗ ಜೋಶಿ ಅವರ ಪತ್ರ ಪ್ರತಿಪಕ್ಷಗಳ ಕೈಗೆ ಅಸ್ತ್ರ ಕೊಟ್ಟಂತಾಗಿದೆ ಎನ್ನಲಾಗ್ತಿದೆ.





ABOUT THE AUTHOR

...view details