ನವದೆಹಲಿ:ಭಾರಿ ವಿವಾದ ಸೃಷ್ಟಿಸಿರುವ ತ್ರಿವಳಿ ತಲಾಖ್ ಮಸೂದೆ ಲೋಕಸಭೆಯಲ್ಲಿಈಗಾಗಲೇ ಅಂಗೀಕಾರಗೊಂಡಿದ್ದು, ಇದೇ ಮಸೂದೆ ಇಂದು ರಾಜ್ಯಸಭೆಯಲ್ಲಿ ಅಂಗೀಕಾರಕ್ಕೆ ಬರಲಿದೆ.
ರಾಜ್ಯಸಭೆ ಅಂಗೀಕಾರಕ್ಕೆ ತ್ರಿವಳಿ ತಲಾಖ್ ಮಸೂದೆ.. ಪ್ರತಿಪಕ್ಷಗಳಿಂದ ಗದ್ದಲ ಸಾಧ್ಯತೆ
ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಅಂಗೀಕಾರಕ್ಕೆ ಬರುವ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿ ತನ್ನ ಎಲ್ಲ ಸದಸ್ಯರಿಗೆ ವಿಪ್ ಜಾರಿ ಮಾಡಿ, ಕಡ್ಡಾಯ ಹಾಜರಿಗೆ ಸೂಚಿಸಿದೆ.
ತ್ರಿವಳಿ ತಲಾಖ್
ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಅಂಗೀಕಾರಕ್ಕೆ ಬರುವ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿ ತನ್ನ ಎಲ್ಲ ಸದಸ್ಯರಿಗೆ ವಿಪ್ ಜಾರಿ ಮಾಡಿ, ಕಡ್ಡಾಯ ಹಾಜರಿಗೆ ಸೂಚಿಸಿದೆ. ಮೇಲ್ಮನೆಯಲ್ಲಿ ಮಸೂದೆ ಅಂಗೀಕಾರಕ್ಕೆ ಅಗತ್ಯವಿರುವ ಸಂಖ್ಯೆ ಇಲ್ಲದಿರುವುದು ಬಿಜೆಪಿಗೆ ಹಿನ್ನಡೆಯಾಗಿದೆ. ಪ್ರತಿಪಕ್ಷಗಳು ಮಸೂದೆಯನ್ನು ಲೋಕಸಭೆಯಲ್ಲಿ ವಿರೋಧಿಸಿದ್ದು, ಇಂದೂ ಸಹ ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇದೆ.
ಬಿಜೆಪಿ ಮಿತ್ರಪಕ್ಷ ಜೆಡಿಯು ಮಸೂದೆ ಸಮ್ಮತಿ ಸೂಚಿಸಿಲ್ಲ. ಕಾಂಗ್ರೆಸ್, ಟಿಎಂಸಿ ಹಾಗೂ ಡಿಎಂಕೆಗಳು ಮಸೂದೆ ಮರುಪರಿಶೀಲನೆಗೆ ಒತ್ತಾಯ ಮಾಡಿವೆ.