ನವದೆಹಲಿ: ಭಾರತ ಹಾಗೂ ಚೀನಾ ಪಡೆಗಳ ನಡುವೆ ಲಡಾಖ್ನಲ್ಲಿ ನಡೆದ ಸಂಘರ್ಷದ ನಂತರ ಭಾರತ ಚೀನಾ ನಿರ್ಮಿತ ವಸ್ತುಗಳಿಗೆ ತಡೆ ಹಾಕಲಾರಂಭಿಸಿದೆ. ಈಗ ಸರ್ಕಾರ ಮತ್ತೂ ಒಂದು ಹೆಜ್ಜೆ ಮುಂದಿಟ್ಟಿದ್ದು, ಅಂತಾರಾಷ್ಟ್ರೀಯ ಮಟ್ಟದ ಕಾಮಗಾರಿ ಟೆಂಡರ್ಗಳಲ್ಲಿ ಚೀನಾ ಕಂಪನಿಗಳು ಬಿಡ್ ಮಾಡದಂತೆ ಸರ್ಕಾರ ನಿಯಮ ರೂಪಿಸುತ್ತಿದೆ.
ಲಡಾಖ್ ಸೌರ ವಿದ್ಯುತ್ ಯೋಜನೆ ಟೆಂಡರ್; ಚೀನಾ ಕಂಪನಿಗಳಿಗೆ ನಿರ್ಬಂಧ ಸಾಧ್ಯತೆ - ಲಡಾಖ್ ಯುದ್ಧ
ಲಡಾಖ್ನಲ್ಲಿ 7400 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರ ನಿರ್ಮಾಣದ ಟೆಂಡರ್ನಲ್ಲಿ ಚೀನಾ ಕಂಪನಿಗಳು ಭಾಗವಹಿಸದಂತೆ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇಂಧನ ಕ್ಷೇತ್ರದ ಕಾಮಗಾರಿಗಳಲ್ಲಿ ಸಾಧ್ಯವಿರುವ ಕಡೆಗಳಲ್ಲೆಲ್ಲ ಸ್ಥಳೀಯವಾಗಿ ತಯಾರಿಸಿದ ವಸ್ತುಗಳನ್ನೇ ಬಳಸಲು ಒತ್ತು ನೀಡುವುದಾಗಿ ಕೇಂದ್ರ ಇಂಧನ ಸಚಿವ ಆರ್.ಕೆ. ಸಿಂಗ್ ಇತ್ತೀಚೆಗೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಲಡಾಖ್ನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಸೌರ ವಿದ್ಯುತ್ ಸ್ಥಾವರಕ್ಕೆ ಯಾವುದೇ ಅಂತಾರಾಷ್ಟ್ರೀಯ ಕಂಪನಿಯು ಬಿಡ್ ಮಾಡಬಹುದಾಗಿದೆ. ಟೆಂಡರ್ಗೆ ಜುಲೈ 31 ಕೊನೆಯ ದಿನವಾಗಿದೆ. ಆದರೆ ಪ್ರಸ್ತುತ ಚೀನಾ ಜೊತೆಗಿನ ಹಳಸಿದ ಸಂಬಂಧ ಹಾಗೂ ಲಡಾಖ್ ಪ್ರದೇಶವು ಸುರಕ್ಷತಾ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿರುವುದರಿಂದ ಈ ಟೆಂಡರ್ನಲ್ಲಿ ಚೀನಾ ಕಂಪನಿಗಳು ಭಾಗವಹಿಸದಂತೆ ಸರ್ಕಾರ ನಿಯಮಗಳನ್ನು ಮಾರ್ಪಡಿಸಲಿದೆ ಎನ್ನಲಾಗುತ್ತಿದೆ.