ಮಾಲ್ಡಾ(ಪಶ್ಚಿಮ ಬಂಗಾಳ):ತಮ್ಮೊಂದಿಗೆ ಮಹಿಳೆ ಸಂಬಂಧ ಮುಂದುವರಿಸಲು ನಿರಾಕರಿಸಿದ್ದರಿಂದ ಆಕೆಯ ಅರೆಬೆತ್ತಲೆ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾ ಪ್ರದೇಶದಲ್ಲಿ ನಡೆದಿದೆ.
ಸಂಬಂಧ ಮುಂದುವರಿಸಲು ನಿರಾಕರಿಸಿದ ಮಹಿಳೆ...ಯುವತಿ ಅರೆಬೆತ್ತಲೆ ಫೋಟೋ ಹರಿಬಿಟ್ಟ ದುರುಳರು! - ಅರೆಬೆತ್ತಲೆ ಫೋಟೋ
ತಮ್ಮೊಂದಿಗೆ ಸಂಬಂಧ ಮುಂದುವರಿಸಲು ನಿರಾಕರಿಸಿದ್ದಕ್ಕಾಗಿ ಆಕೆಯ ಖಾಸಗಿ ಫೋಟೋಗಳನ್ನ ಇಬ್ಬರು ದುರುಳರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಇಬ್ಬರು ಯುವಕರೊಂದಿಗೆ ಪರಿಚಯವಿದ್ದ ಮಹಿಳೆಯೊಬ್ಬಳು ತದನಂತರ ಅವರೊಂದಿಗೆ ಸಂಬಂಧ ಮುಂದುವರಿಸಲು ನಿರಾಕರಿಸಿದ್ದಾಳಂತೆ. ಈ ವೇಳೆ, ಆಕೆಯ ಮೊಬೈಲ್ನಿಂದ ಕೆಲವೊಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎಂದು ಆಕೆ ಇದೀಗ ಖುದ್ದಾಗಿ ದೂರು ದಾಖಲು ಮಾಡಿದ್ದಾಳೆ.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಇಬ್ಬರು ಆರೋಪಿಗಳಿಗಾಗಿ ಶೋಧಕಾರ್ಯ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿದ್ದ ಫೋಟೋ ಡಿಲಿಟ್ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಅಲೋಕ್ ರಾಜೋರಿ ತಿಳಿಸಿದ್ದಾರೆ.