ಕರ್ನಾಟಕ

karnataka

ETV Bharat / bharat

ಚೀನಾ ವಸ್ತು ಬಳಸುವವರ ಕಾಲು ಮುರಿದು, ಮನೆಗೆ ಬೆಂಕಿ ಹಚ್ಚಿ.. ಬಿಜೆಪಿ ನಾಯಕನ ವಿವಾದಿತ ಹೇಳಿಕೆ - ವಿವಾದಾತ್ಮಕ ಹೇಳಿಕೆ ನೀಡಿದ ಜಾಯ್ ಬ್ಯಾನರ್ಜಿ

ಗಡಿಯಲ್ಲಿ ಹುತಾತ್ಮರಾದ ನಮ್ಮ ಸೈನಿಕರ ಸಮಸ್ಯೆಯನ್ನು ಅವರು ಇನ್ನೂ ನಿರ್ಲಕ್ಷಿಸಿದ್ರೆ, ಅವರ ಕುಟುಂಬ ಸದಸ್ಯರ ಶೋಕ ಮತ್ತು ಕಣ್ಣೀರಿನ ಬಗ್ಗೆ ಕಾಳಜಿ ಇಲ್ಲದಿದ್ದರೆ ಅಂತವರಿಗೆ ನಾನು ಏನನ್ನೂ ಹೇಳಲು ಸಾಧ್ಯವಿಲ್ಲ. ಇದರಲ್ಲಿ ಯಾವುದೇ ರಾಜಕೀಯವಿಲ್ಲ, ಇದು ನನಗೆ ದೇಶಪ್ರೇಮದ ವಿಷಯ..

Joy Banerjee controversy
ಬಿಜೆಪಿ ನಾಯಕ ಜಾಯ್ ಬ್ಯಾನರ್ಜಿ ವಿವಾದ

By

Published : Jun 19, 2020, 8:17 PM IST

Updated : Jun 19, 2020, 11:38 PM IST

ಕೋಲ್ಕತಾ :ಚೀನಾದ ಉತ್ಪನ್ನಗಳನ್ನು ಬಳಸುವವರ ಕಾಲುಗಳನ್ನು ಮುರಿದು ಅವರ ಮನೆಗೆ ಬೆಂಕಿ ಹಚ್ಚಬೇಕು ಎಂದು ಪಶ್ಚಿಮ ಬಂಗಾಳದ ನಟ ಮತ್ತು ಬಿಜೆಪಿ ನಾಯಕ ಜಾಯ್ ಬ್ಯಾನರ್ಜಿ ವಿವಾದಿತ ಹೇಳಿಕೆ ನೀಡಿದ್ದಾರೆ.

ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ಜನರಲ್ಲಿ ಮನವಿ ಮಾಡಿದ ಅವರು, ಬೆದರಿಕೆಯನ್ನೂ ಹಾಕಿದ್ದಾರೆ. ಗಡಿಯಲ್ಲಿ ಭಾರತ-ಚೀನಾ ಸೈನಿಕರ ಸಂಘರ್ಷದಿಂದಾಗಿ ನಮ್ಮ ಸೈನಿಕರು ಹುತಾತ್ಮರಾಗಿದ್ದಾರೆ. ಹೀಗಾಗಿ ಯಾವುದೇ ಚೀನಿ ಉತ್ಪನ್ನಗಳನ್ನು ಮನೆಗಳಲ್ಲಿ ಬಳಸದಂತೆ ನಾನು ಜನರಲ್ಲಿ ಮನವಿ ಮಾಡುತ್ತೇನೆ ಎಂದಿದ್ದಾರೆ. ಯಾರಾದರೂ ಚೀನಿ ವಸ್ತುಗಳನ್ನು ಬಳಸಿದರೆ ಅಂತವರ ಕಾಲನ್ನು ಮುರಿದು, ಅವರ ಮನೆಗೆ ಬೆಂಕಿ ಹಚ್ಚಬೇಕು ಎಂದಿದ್ದಾರೆ.

ಚೀನಾ ಸರಕುಗಳನ್ನು ಬಹಿಷ್ಕರಿಸುವ ಅಗತ್ಯವನ್ನು ಜನರು ಇನ್ನಾದರು ಅರಿತುಕೊಳ್ಳದಿದ್ರೆ ಅದೊಂದು ರಾಷ್ಟ್ರ ವಿರೋಧಿ ಕೃತ್ಯವಾಗಿದೆ. ಗಡಿಯಲ್ಲಿ ಹುತಾತ್ಮರಾದ ನಮ್ಮ ಸೈನಿಕರ ಸಮಸ್ಯೆಯನ್ನು ಅವರು ಇನ್ನೂ ನಿರ್ಲಕ್ಷಿಸಿದ್ರೆ, ಅವರ ಕುಟುಂಬ ಸದಸ್ಯರ ಶೋಕ ಮತ್ತು ಕಣ್ಣೀರಿನ ಬಗ್ಗೆ ಕಾಳಜಿ ಇಲ್ಲದಿದ್ದರೆ ಅಂತವರಿಗೆ ನಾನು ಏನನ್ನೂ ಹೇಳಲು ಸಾಧ್ಯವಿಲ್ಲ. ಇದರಲ್ಲಿ ಯಾವುದೇ ರಾಜಕೀಯವಿಲ್ಲ, ಇದು ನನಗೆ ದೇಶಪ್ರೇಮದ ವಿಷಯ ಎಂದಿದ್ದಾರೆ.

2019ರಲ್ಲಿ ಪಶ್ಚಿಮ ಬಂಗಾಳದ ಉಲುಬೇರಿಯಾ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಜಾಯ್ ಬ್ಯಾನರ್ಜಿ ಟಿಎಂಸಿ ಅಭ್ಯರ್ಥಿಯ ವಿರುದ್ಧ ಸೋಲು ಅನುಭವಿಸಿದ್ದರು.

Last Updated : Jun 19, 2020, 11:38 PM IST

ABOUT THE AUTHOR

...view details