ಕರ್ನಾಟಕ

karnataka

ETV Bharat / bharat

ಕಾಂಗ್ರೆಸ್​ ಅಧಿಕಾರಕ್ಕೆ ಬಂದ್ರೆ ಆಯುಷ್ಮಾನ್​ ಭಾರತ್​ಗಿಂತ ಒಳ್ಳೆಯ ಆರೋಗ್ಯ ಸ್ಕೀಂ... ರಾಗಾ ಭರವಸೆ - ಛತ್ತೀಸ್​ಗಢ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆಯುಷ್ಮಾನ್​ ಭಾರತ ಸೀಮಿತ ನೆಲೆಗಟ್ಟಿನಲ್ಲಿದೆ ಎಂದು ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು

ಛತ್ತೀಸ್​ಗಢದಲ್ಲಿ ಆರೋಗ್ಯ ಅಧಿಕಾರಿಗಳೊಂದಿಗೆ ರಾಹುಲ್ ಗಾಂಧಿ ಸಂವಾದ ನಡೆಸಿದರು

By

Published : Mar 15, 2019, 2:24 PM IST

ಛತ್ತೀಸ್​ಗಢ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆಯುಷ್ಮಾನ್​ ಭಾರತ ಸೀಮಿತ ನೆಲೆಗಟ್ಟಿನಲ್ಲಿ, ಇಂತಿಷ್ಟು ಜನರನ್ನು ಮಾತ್ರ ಒಳಗೊಳ್ಳುವ ವಿಮೆ ಯೋಜನೆ ಎಂದು ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಛತ್ತೀಸ್​ಗಢದಲ್ಲಿ ಆರೋಗ್ಯ ಅಧಿಕಾರಿಗಳೊಂದಿಗೆ ರಾಹುಲ್ ಗಾಂಧಿ ಸಂವಾದ ನಡೆಸಿದರು

ಛತ್ತೀಸ್​ಗಢದ ರಾಯಪುರದಲ್ಲಿ ನಡೆದ ಆರೋಗ್ಯ ಅಧಿಕಾರಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಯುಷ್ಮಾನ್​ ಭಾರತ 15-20 ಸಿರಿವಂತ ಉದ್ಯಮಿಗಳ ಕರಪತ್ರದಂತಿದೆ. ಈ ತರಹದ ಯೋಜನೆಗಳನ್ನು ನಾವು ಮುನ್ನಡೆಸುವುದಿಲ್ಲ ಎಂದು ಕುಟುಕಿದರು.

ಆಸ್ಪತ್ರೆಗಳಿಗೆ ಹಾಗೂ ವೈದ್ಯಕೀಯ ಸಿಬ್ಬಂದಿಯಿಂದ ಯಾವುದೇ ಸಮರ್ಪಕ ಬೆಂಬಲವಿಲ್ಲದ ವಿಮೆ ಪದ್ದತಿ ಆಯುಷ್ಮಾನ್ ಭಾರತ್​ ಆಗಿದೆ ಎಂದು ಹೇಳಿದರು.

ಆರೋಗ್ಯ ಸೇವೆ ಎಂಬುದು ಬುನಾದಿಯಿದ್ದಂತೆ. ಅದನ್ನು ಸದೃಢವಾಗಿ ನಿರ್ಮಿಸಬೇಕು. ಕಾಂಗ್ರೆಸ್​ ಸರ್ಕಾರ 2019ರಲ್ಲಿ ಆರೋಗ್ಯ ಸೇವೆಗೆ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ನೀಡಲಿದೆ. ಜಿಡಿಪಿಯ ಶೇ 3ರಷ್ಟು ವೆಚ್ಚವನ್ನು ಹೆಚ್ಚಿಸಲಿದ್ದೇವೆ ಎಂದ ಅವರು, ಲೋಕಸಭೆ ಚುನಾವಣೆಯಲ್ಲಿ ನಾವೇ ಗೆದ್ದುಬರುತ್ತೇವೆ ಎಂಬ ವಿಶ್ವಾಸದಿಂದ ಮಾತನಾಡಿದರು.

ಆರೋಗ್ಯ ಸಿಬ್ಬಂದಿಯೇ ಆರೋಗ್ಯ ವಲಯದ ಸಮಸ್ಯೆಗಳಿಗೆ ಪರಿಹಾರ ನೀಡಬೇಕು. ವೈದ್ಯಕೀಯ ಸೌಲಭ್ಯಗಳು, ವ್ಯವಸ್ಥೆ ಹಾಗೂ ವಿಮೆ ಕುರಿತಾಗಿ ಜನರು ನೀಡುವ ಸಲಹೆಗಳನ್ನೇ ನಾವು ಆದ್ಯತೆಯಾಗಿ ಸ್ವೀಕರಿಸುತ್ತೇವೆ ಎಂದರು.

ಕಾಯ್ದೆ ರೂಪದಲ್ಲಿ ಆರೋಗ್ಯಸೇವೆ ಹಕ್ಕನ್ನು ಒದಗಿಸುವುದದು ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿದೆ. ಭಾರತೀಯರಿಗೆಲ್ಲ ಕನಿಷ್ಠ ಆರೋಗ್ಯ ಸೇವೆ ಒದಗಿಸುವ ಗ್ಯಾರಂಟಿ ನೀಡುತ್ತೇವೆ. ವೈದ್ಯಕೀಯ ಸಿಬ್ಬಂದಿ ಸಂಖ್ಯೆಯನ್ನೂ ಹೆಚ್ಚಿಸುತ್ತೇವೆ ಎಂದು ಭರಸವಸೆ ನೀಡಿದರು.

ABOUT THE AUTHOR

...view details