ಕರ್ನಾಟಕ

karnataka

By

Published : Jun 26, 2020, 8:08 PM IST

ETV Bharat / bharat

ಕೊರೊನಿಲ್ ಕ್ಲಿನಿಕಲ್ ಪ್ರಯೋಗಕ್ಕೆ ಆಯುಷ್ ಸಚಿವಾಲಯ ಅನುಮತಿ.. ನಿಮ್ಸ್​ ಮುಖ್ಯಸ್ಥ ಡಾ ತೋಮರ್

ಸರ್ಕಾರ ಅನುಮತಿ ನೀಡಿದ ನಂತರವೇ ನಿಗದಿತ ಔಷಧಿಗಳ ಪ್ರಯೋಗಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಸ್ಥಾಪಿಸಿರುವ ಕ್ಲಿನಿಕಲ್ ಟ್ರಯಲ್ಸ್ ರಿಜಿಸ್ಟ್ರಿ-ಇಂಡಿಯಾ (ಸಿಟಿಆರ್​ಐ) ಸಂಪರ್ಕಿಸಿದ್ದೇವೆ ಎಂದಿದ್ದಾರೆ..

Ayush Ministry is lying
ರಾಜಸ್ಥಾನ ನಿಮ್ಸ್ ಮುಖ್ಯಸ್ಥ ಡಾ.ಬಿ.ಎಸ್.ತೋಮರ್

ಜೈಪುರ :ಪತಂಜಲಿ ಆಯುರ್ವೇದ ಔಷಧ ಕೊರೊನಿಲ್ ಕ್ಲಿನಿಕಲ್ ಪ್ರಯೋಗಕ್ಕೆ ಆಯುಷ್ ಸಚಿವಾಲಯವು ಪತಂಜಲಿಗೆ ಅನುಮತಿ ನೀಡಿದೆ ಎಂದು ರಾಜಸ್ಥಾನ ನಿಮ್ಸ್ ಮುಖ್ಯಸ್ಥ ಡಾ.ಬಿ ಎಸ್ ತೋಮರ್ ಹೇಳಿದ್ದಾರೆ.

ಕೋವಿಡ್-19ಗೆ ಲಸಿಕೆ ಅಭಿವೃದ್ಧಿಪಡಿಸಲು ಆಸ್ಪತ್ರೆಗಳು ಅಥವಾ ಅಲೋಪತಿ ಘಟಕಗಳು ಮತ್ತಷ್ಟು ಮುಂದುವರಿಯಬೇಕು ಎಂದು ಸರ್ಕಾರ ಮೇ 22ರಂದು ಗೆಜೆಟ್ ಬಿಡುಗಡೆ ಮಾಡಿದೆ ಎಂದು ತೋಮರ್ ಹೇಳಿದ್ದಾರೆ. ಸರ್ಕಾರ ಅನುಮತಿ ನೀಡಿದ ನಂತರವೇ ನಿಗದಿತ ಔಷಧಿಗಳ ಪ್ರಯೋಗಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಸ್ಥಾಪಿಸಿರುವ ಕ್ಲಿನಿಕಲ್ ಟ್ರಯಲ್ಸ್ ರಿಜಿಸ್ಟ್ರಿ-ಇಂಡಿಯಾ (ಸಿಟಿಆರ್​ಐ) ಸಂಪರ್ಕಿಸಿದ್ದೇವೆ ಎಂದಿದ್ದಾರೆ.

ರಾಜಸ್ಥಾನ ನಿಮ್ಸ್ ಮುಖ್ಯಸ್ಥ ಡಾ. ಬಿ ಎಸ್ ತೋಮರ್

ಈ ಹಿಂದೆ, ರಾಜಸ್ಥಾನದ ಆರೋಗ್ಯ ಇಲಾಖೆಯು ಕೊರೊನಾ ವೈರಸ್ ರೋಗಿಗಳ ಮೇಲೆ ಪತಂಜಲಿ ಆಯುರ್ವೇದ ಔಷಧ ಕೊರೊನಿಲ್‌ನ ಪರೀಕ್ಷಿಸುವ ಬಗ್ಗೆ ವಿವರಣೆಯನ್ನು ಕೋರಿ ನಿಮ್ಸ್ ಆಸ್ಪತ್ರೆಗೆ ನೋಟಿಸ್ ನೀಡಿತ್ತು.

'ನಾವು ಮೂರು ದಿನಗಳಲ್ಲಿ ವಿವರಣೆಯನ್ನು ಕೋರಿ ಬುಧವಾರ ಸಂಜೆ ಆಸ್ಪತ್ರೆಗೆ ನೋಟಿಸ್ ನೀಡಿದ್ದೇವೆ. ಆಸ್ಪತ್ರೆ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿಲ್ಲ ಅಥವಾ ಅನುಮತಿ ಕೋರಿಲ್ಲ' ಎಂದು ಜೈಪುರದ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ.ನಾರೋತ್ತಂ ಶರ್ಮಾ ಹೇಳಿದ್ದಾರೆ.

ಕೊರೊನಿಲ್ ಎಂಬ ಔಷಧಿಯನ್ನು ತಯಾರಿಸಲು ಎಲ್ಲಾ ಕಾರ್ಯವಿಧಾನಗಳನ್ನು ಅನುಸರಿಸಲಾಗಿದೆ. ಪರವಾನಗಿ ಪಡೆಯುವಾಗ ಯಾವುದೇ ತಪ್ಪು ಮಾಡಿಲ್ಲ ಎಂದು ಪತಂಜಲಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಚಾರ್ಯ ಬಾಲಕೃಷ್ಣ ಹೇಳಿದ್ದರು.

ABOUT THE AUTHOR

...view details