ಮುಂಬೈ(ಮಹಾರಾಷ್ಟ್ರ):ನಗರದ ಕೆಇಎಂ ಆಸ್ಪತ್ರೆಯಲ್ಲಿನ ವಾರ್ಡ್‌ಗಳಲ್ಲಿ ಕೊರೊನಾ ಸೋಂಕಿತ ಮೃತದೇಹಗಳೊಂದಿಗೆ ಇತರ ರೋಗಿಗಳಿಗೂ ಚಿಕಿತ್ಸೆ ನೀಡುತ್ತಿರುವ ಭೀಕರ ದೃಶ್ಯಗಳು ಇದೀಗ ಎಲ್ಲೆಡೆ ಹರಿದಾಡುತ್ತಿದ್ದು, ಸೋಂಕು ಮತ್ತಷ್ಟು ಹರಡುವಿಕೆಗೆ ಇದು ಕಾರಣವಾಗಲಿದೆ ಎಂಬ ಆತಂಕ ಸೃಷ್ಟಿಯಾಗಿದೆ.
ಸಾಮಾನ್ಯ ರೋಗಿಗಳ ವಾರ್ಡ್ನಲ್ಲಿಯೇ ಕೊರೊನಾ ಸೋಂಕಿತರ ಶವಗಳು!: ವಿಡಿಯೋ ಎಷ್ಟು ಸತ್ಯ!
ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ಸಾಮಾನ್ಯ ರೋಗಿಗಳಿರುವ ವಾರ್ಡ್ನಲ್ಲಿಯೇ ಕೊರೊನಾ ಸೋಂಕಿತರ ಶವಗಳನ್ನು ಇರಿಸುತ್ತಿರುವ ದೃಶ್ಯಗಳು ಸೆರೆಯಾಗಿದ್ದು, ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ರೋಗಿಗಳೊಂದಿಗೆ ಕೊರೊನ ಸೋಂಕಿತ ಶವಗಳು
ಈ ಮೊದಲು, ಮುಂಬೈನ ಸಿಯಾನ್ ಆಸ್ಪತ್ರೆಯಿಂದಲೂ ಸಹ ಇದೇ ರೀತಿಯ ವಿಡಿಯೋ ತುಣುಕುಗಳು ದೊರೆತಿದ್ದು, ಇದರಲ್ಲಿಯೂ ಸಹ ಕೊರೊನಾ ವೈರಸ್ ರೋಗಿಗಳ ಮೃತ ದೇಹಗಳನ್ನು ಸಾಮಾನ್ಯ ರೋಗಿಗಳ ಜೊತೆಗೆ ರಾಶಿ ಮಾಡಲಾಗುತ್ತಿತ್ತು.
ಈ ಎರಡೂ ಆಸ್ಪತ್ರೆಗಳನ್ನು ಮುಂಬೈನ ನಾಗರಿಕ ಸಂಸ್ಥೆ, ಬಿಎಂಸಿ ನಡೆಸುತ್ತಿದೆ. ಈ ವಿಡಿಯೋಗಳನ್ನು ಚಿತ್ರೀಕರಿಸಿದ್ದು ತುರ್ತು ಮತ್ತು ಅಪಘಾತದ ವಾರ್ಡ್‌ಗಳಲ್ಲಿ ಹೊರತು ಕೊರೊನಾ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡುವ ವಾರ್ಡ್‌ಗಳು ಅಲ್ಲ ಎಂದು ತಿಳಿದು ಬಂದಿದೆ.