ಕರ್ನಾಟಕ

karnataka

ETV Bharat / bharat

ಕನ್ಯಾ ರಾಶಿಯವರ 2020 ಹೊಸ ವರ್ಷದ ಫಲಾಫಲ ಹೇಗಿದೆ ನೋಡಿ

ಫೆಬ್ರವರಿ ಬಳಿಕ ಕುಟುಂಬ ವಿಚಾರಗಳು ಉತ್ತಮವಾಗಿರಲಿವೆ. ನೀವು ನಿಮ್ಮ ಜೀವನದಲ್ಲಿ ಹೆಚ್ಚು ಪ್ರಯತ್ನಗಳನ್ನು ಪಡಬೇಕಾಗುತ್ತದೆ. ನೀವು ಹೊಸ ಸಂಬಂಧವನ್ನು ಪ್ರಾರಂಭಿಸಬೇಕಿದ್ದಲ್ಲಿ, ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಈ ವರ್ಷ ವಿವಾಹಿತ ಜೋಡಿಗಳಿಗೆ ಅನುಕೂಲಕರವಾಗಿರಬಹುದು.

astrology from etv bharat
ಕನ್ಯಾ ರಾಶಿಯವರ 2020 ಹೊಸ ವರ್ಷದ ಫಲಾಫಲ

By

Published : Jan 6, 2020, 5:00 AM IST

ಈ ವರ್ಷವು ಹೊಸ ಅವಕಾಶಗಳು ಮತ್ತು ಯಶಸ್ಸಿನ ಭರವಸೆಯನ್ನು ನಿಮಗೆ ತರಬಹುದು. ನೀವು ಆರ್ಥಿಕವಾಗಿ ಪ್ರಗತಿ ಕಾಣುವಿರಿ, ಆದರೆ ನಿಮ್ಮ ಕುಟುಂಬದ ಬಗ್ಗೆ ನೀವು ಎಚ್ಚರದಿಂದ ಇರಬೇಕು. ನೀವು ಅವರೊಂದಿಗೆ ಸಂವಹನ ಮಾಡುವಾಗ ನಿಮ್ಮ ಮಾತಿನ ಬಗ್ಗೆ ಸ್ಪಷ್ಟತೆ ಇರಬೇಕು. ಮತ್ತು ಪ್ರತಿ ಬಾರಿಯೂ ನೀವೊಬ್ಬರೇ ಸರಿ ಅಲ್ಲ ಎಂಬುದನ್ನು ಅರ್ಥೈಸಿಕೊಳ್ಳಬೇಕು. ಫೆಬ್ರವರಿ ಬಳಿಕ ಕುಟುಂಬ ವಿಚಾರಗಳು ಉತ್ತಮವಾಗಲಿವೆ. ನೀವು ನಿಮ್ಮ ಜೀವನದಲ್ಲಿ ಹೆಚ್ಚು ಪ್ರಯತ್ನಗಳನ್ನು ಪಡಬೇಕಾಗುತ್ತದೆ. ಹೊಸ ಸಂಬಂಧವನ್ನು ಪ್ರಾರಂಭಿಸಬೇಕಿದ್ದಲ್ಲಿ, ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಈ ವರ್ಷವು ವಿವಾಹಿತ ಜೋಡಿಗಳಿಗೆ ಅನುಕೂಲಕರವಾಗಿರಬಹುದು.

ನಿಮ್ಮ ವ್ಯವಹಾರದಲ್ಲಿ, ನೀವು ಉತ್ತಮ ಸ್ಪರ್ಧೆಯನ್ನು ಎದುರಿಸಬಹುದು. ನಿಮ್ಮ ಹಣಕಾಸು ಸ್ಥಿತಿಯು ಉತ್ತಮವಾಗಿರುತ್ತದೆ. ಆದರೆ ನಿಮ್ಮ ಕುಟುಂಬಕ್ಕಾಗಿ ಮಾಡಿದ ಕೆಲಸಕ್ಕಾಗಿ ನೀವು ನಿರೀಕ್ಷಿತ ಮನ್ನಣೆಯನ್ನು ಪಡೆಯುವುದಿಲ್ಲ. ನಿಮ್ಮ ಮಕ್ಕಳ ಆರ್ಥಿಕ ಸಹಕಾರವು ಫೆಬ್ರವರಿಯಿಂದ ಕಡಿಮೆಯಾಗಬಹುದು. ವಿದ್ಯಾರ್ಥಿಗಳು ಈ ವರ್ಷವನ್ನು ಹೆಚ್ಚು ಸಕಾರಾತ್ಮಕವಾಗಿ ಪ್ರಾರಂಭಿಸುತ್ತಾರೆ. ಫೆಬ್ರವರಿ ಕೊನೆಯಿಂದ ನೀವು ಹೆಚ್ಚು ಕಠಿಣ ಶ್ರಮ ಪಡಬೇಕಾಗುತ್ತದೆ. ಸೆಪ್ಟಂಬರ್‌ನಿಂದ ನೀವು ನಿಮ್ಮ ಸ್ನೇಹಿತರೊಂದಿಗೆ ಸಮಯ ವ್ಯರ್ಥ ಮಾಡುವುದನ್ನು ತಪ್ಪಿಸಬೇಕು. ವಿದೇಶಿ ಶಿಕ್ಷಣಕ್ಕೆ ತೆರಳಲು ಬಯಸಿದ್ದಲ್ಲಿ, ಈ ವರ್ಷದ ಕೊನೆಯಲ್ಲಿ ಯಶಸ್ಸು ಪಡೆಯುವಿರಿ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿ, ಈ ವರ್ಷವು ಅನುಕೂಲಕರವಾಗಿರುತ್ತದೆ. ಆರೋಗ್ಯವನ್ನು ಕಾಯ್ದುಕೊಳ್ಳಲು ಸಮತೋಲಿತ ಆಹಾರಕ್ರಮ ಮತ್ತು ಸರಿಯಾದ ವಿಶ್ರಾಂತಿ ತೆಗೆದುಕೊಳ್ಳುವಂತೆ ಸಲಹೆ ನೀಡಲಾಗುತ್ತದೆ. ಆರೋಗ್ಯದಿಂದಿರಲು ನೀವು ಧ್ಯಾನ ಮತ್ತು ವ್ಯಾಯಾಮವನ್ನು ಕೂಡಾ ಮಾಡಬೇಕು.

ABOUT THE AUTHOR

...view details