ಕೊಹಿಮಾ(ನಾಗಾಲ್ಯಾಂಡ್): ದಿಮಾಪುರದಲ್ಲಿ ಅಕ್ರಮ ಮದ್ಯದ ಬಾಟಲ್ ತಯಾರಿಕಾ ಘಟಕವನ್ನು ಅಸ್ಸಾಂ ರೈಫಲ್ಸ್ ತಂಡ ಬುಧವಾರ ಪತ್ತೆ ಹಚ್ಚಿದ್ದು, ಹಲವಾರು ನಿಷಿದ್ಧ ವಸ್ತುಗಳನ್ನು ವಶಪಡಿಸಿಕೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಕ್ರಮವಾಗಿ ಮದ್ಯದ ಬಾಟಲ್ ತಯಾರಿಕೆ: ಘಟಕದ ಮೇಲೆ ದಾಳಿ, ಓರ್ವನ ಸೆರೆ - ದಿಮಾಪುರದಲ್ಲಿ ಅಕ್ರಮ ಮದ್ಯ ಬಾಟ್ಲಿಂಗ್ ಸ್ಥಾವರ
ನಾಗಾಲ್ಯಾಂಡ್ನಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ನಡೆಯುತ್ತಿರುವ ಕಾರ್ಯಾಚರಣೆಯ ಭಾಗವಾಗಿ ದಿಮಾಪುರದಲ್ಲಿ ಅಕ್ರಮ ಮದ್ಯದ ಬಾಟಲ್ ತಯಾರಿಕಾ ಘಟಕದ ಮೇಲೆ ಅಸ್ಸಾಂ ರೈಫಲ್ಸ್ ತಂಡದ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಮದ್ಯ
ನಾಗಾಲ್ಯಾಂಡ್ನಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ನಡೆಯುತ್ತಿರುವ ಕಾರ್ಯಾಚರಣೆಯ ಭಾಗವಾಗಿ ದಿಮಾಪುರದ 7ನೇ ಮೈಲ್ ಮಾಡೆಲ್ ಗ್ರಾಮದ ಪ್ರದೇಶದಲ್ಲಿ ಭದ್ರತಾ ಪಡೆಗಳು ಅಕ್ರಮ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪಿಆರ್ಒ ಮತ್ತು ಅಸ್ಸಾಂ ರೈಫಲ್ಸ್ (ಉತ್ತರ) ಇನ್ಸ್ಪೆಕ್ಟರ್ ಜನರಲ್ ಕರ್ನಲ್ ಸಂಜೀವ್ ಸೇಥಿ ತಿಳಿಸಿದ್ದಾರೆ.
ಈ ಸಂಬಂಧ ಎಲೆಕ್ಟೊ ಸುಮಿ (36) ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ಮುಂದುವರೆಸಲಾಗಿದೆ.