ಕರ್ನಾಟಕ

karnataka

ETV Bharat / bharat

370ನೇ ವಿಧಿ ರದ್ದು: ಕೇಂದ್ರದ ನಿರ್ಧಾರಕ್ಕೆ ಜೈ ಎಂದ ಮಹಾರಾಜ ಹರಿಸಿಂಗ್​ ಪುತ್ರ ಕರಣ್​ ಸಿಂಗ್​​​! - ಕರಣ್ ಸಿಂಗ್

ಕೇಂದ್ರ ಸರ್ಕಾರದಿಂದ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನದ 370ನೇ ಕಲಂ ರದ್ದು ಆಗಿದ್ದು, ಕೇಂದ್ರದ ನಿರ್ಧಾರಕ್ಕೆ ಕಾಂಗ್ರೆಸ್​​ನ ಹಿರಿಯ ನಾಯಕ ಜೈಕಾರ ಹಾಕಿದ್ದಾರೆ.

ಕಾಂಗ್ರೆಸ್​ ಹಿರಿಯ ಮುಖಂಡ ಕರಣ್ ಸಿಂಗ್

By

Published : Aug 8, 2019, 5:11 PM IST

Updated : Aug 8, 2019, 6:00 PM IST

ಶ್ರೀನಗರ:ಕಣಿವೆ ನಾಡು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್​​ 370 ರದ್ದುಗೊಂಡಿದ್ದು, ಇದಕ್ಕೆ ವಿಪಕ್ಷಗಳ ಕೆಲ ನಾಯಕರು ವಿರೋಧ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಕೇಂದ್ರದ ನಡೆಯನ್ನು ಸ್ವಾಗತಿಸಿದ್ದಾರೆ.

ಇದೀಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​​ನ ಹಿರಿಯ ಮುಖಂಡ ಹಾಗೂ ಜಮ್ಮು-ಕಾಶ್ಮೀರದ ಕೊನೆಯ ಸದರ್-ಎ-ರಿಯಾಸತ್ ಕರಣ್ ಸಿಂಗ್ ಕೇಂದ್ರದ ನಡೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರದಲ್ಲಿ ಅನೇಕ ಸಕಾರಾತ್ಮಕ ಅಂಶಗಳನ್ನೊಳಗೊಂಡಿದ್ದು, ಲಡಾಕ್​ ಪ್ರದೇಶವನ್ನ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಮಾಡಿರುವುದು ನಿಜಕ್ಕೂ ಸ್ವಾಗತಾರ್ಹ ಎಂದು 88 ವರ್ಷದ ಕರಣ್​ ಸಿಂಗ್​ ಹೇಳಿದ್ದಾರೆ.

ಕರಣ್​ ಸಿಂಗ್​ ಪತ್ರ/Karan Singh

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪತ್ರ ಬರೆದು ಮಾಹಿತಿ ನೀಡಿರುವ ಕರಣ್​ ಸಿಂಗ್​, ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಅಧಿಕಾರದ ಆರ್ಟಿಕಲ್​ 370 ರದ್ದು ಮಾಡಿರುವುದರಿಂದ ರಾಜಕೀಯ ಅಧಿಕಾರ ನ್ಯಾಯಯುತವಾಗಿ ಹಂಚಿಕೆಯಾಗಲಿದ್ದು, ಇನ್ಮುಂದೆ ಕೇಂದ್ರಾಡಳಿತ ಪ್ರದೇಶಗಳಿಗೆ ಎಲ್ಲ ರೀತಿಯ ಸೌಲಭ್ಯ ಸಿಗಲಿವೆ ಎಂದಿರುವ ಅವರು, ಜಮ್ಮು-ಕಾಶ್ಮೀರ​ ಆದಷ್ಟು ಬೇಗ ಪೂರ್ಣ ರಾಜ್ಯತ್ವವನ್ನು ಪಡೆಯಬೇಕು, ಇದರಿಂದಾಗಿ ದೇಶದ ಜನರು ದೇಶದ ಉಳಿದ ಭಾಗಗಳಿಗೆ ಲಭ್ಯವಿರುವ ರಾಜಕೀಯ ಹಕ್ಕುಗಳನ್ನು ಪಡೆಯಬಹುದು ಎಂದು ತಿಳಿಸಿದ್ದಾರೆ.

ಇನ್ನು 1947ರಲ್ಲಿ ಕರಣ್​ ಸಿಂಗ್​ ಅವರ ತಂದೆ ಮಹಾರಾಜ ಹರಿಸಿಂಗ್​​ ದೇಶಕ್ಕೆ ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ಕಾಶ್ಮೀರ ಸ್ವತಂತ್ರವಾಗಿ ಉಳಿಯಲು ಬಯಸಿದ್ದರು ಎಂದು ಇದೇ ವೇಳೆ ಅವರು ತಿಳಿಸಿದ್ದಾರೆ.

Last Updated : Aug 8, 2019, 6:00 PM IST

ABOUT THE AUTHOR

...view details