ಕರ್ನಾಟಕ

karnataka

ETV Bharat / bharat

ಪುಲ್ವಾಮಾದಲ್ಲಿ ಮತ್ತೆ ಐಇಡಿ ಸದ್ದು, ಯೋಧರ ವಾಹನ ಬ್ಲಾಸ್ಟ್​​... ಮುಂದುವರಿದ ಗುಂಡಿನ ಚಕಮಕಿ! - ಐಇಡಿ ಬ್ಲಾಸ್ಟ್​

ಕಳೆದ ಕೆಲ ತಿಂಗಳ ಹಿಂದೆ ಪುಲ್ವಾಮಾದಲ್ಲಿ ಉಗ್ರರು ಅಟ್ಟಹಾಸ ಮೆರೆದು, 40 ಯೋಧರ ಸಾವಿಗೆ ಕಾರಣವಾಗಿದ್ದರು. ಇದೀಗ ಮತ್ತೊಮ್ಮೆ ಇದೇ ಜಾಗದಲ್ಲಿ ಉಗ್ರರು ಬಾಲ ಬಿಚ್ಚಿದ್ದಾರೆ. ಪುಲ್ವಾಮಾದಿಂದ 28 ಕಿ.ಮೀ ದೂರದಲ್ಲಿ ಯೋಧರ ವಾಹನದ ಮೇಲೆ ಅಟ್ಟಹಾಸ ಮೆರೆದಿದ್ದಾರೆ.

ಪುಲ್ವಾಮಾದಲ್ಲಿ ಯೋಧರ ವಾಹನದ ಮೇಲೆ ಐಇಡಿ ಬ್ಲಾಸ್ಟ್

By

Published : Jun 17, 2019, 8:00 PM IST

ಶ್ರೀನಗರ:ಕಳೆದ ಕೆಲ ತಿಂಗಳ ಹಿಂದೆ ಪುಲ್ವಾಮಾದಲ್ಲಿ ಐಐಡಿ ಬ್ಲಾಸ್ಟ್​ ಮಾಡಿದ್ದ ಉಗ್ರರು 40ಕ್ಕೂ ಹೆಚ್ಚು ಯೋಧರ ಬಲಿ ಪಡೆದುಕೊಂಡಿದ್ದರು. ಸದ್ಯ ಮತ್ತೊಂದು ದುಷ್ಕೃತ್ಯ ಮೆರೆದಿರುವುದಾಗಿ ತಿಳಿದು ಬಂದಿದೆ.

ಪುಲ್ವಾಮಾದಲ್ಲಿ ಯೋಧರ ವಾಹನದ ಮೇಲೆ ಐಇಡಿ ಬ್ಲಾಸ್ಟ್

44 ರಾಷ್ಟ್ರೀಯ ರೈಫಲ್​ನ ಯೋಧರು ಕೆಲಸ ಮುಗಿಸಿ ತೆರಳುತ್ತಿದ್ದ ವೇಳೆ ಐಇಡಿ ಬ್ಲಾಸ್ಟ್​ ಆಗಿದ್ದು, ಘಟನೆಯಿಂದ ಎಂಟು ಯೋಧರು ಗಾಯಗೊಂಡಿದ್ದಾರೆ.

ಸುಧಾರಿತ ಬಾಂಬ್​ ಬ್ಲಾಸ್ಟ್​ ಆಗುತ್ತಿದ್ದಂತೆ ಉಗ್ರರು- ಭಾರತೀಯ ಯೋಧರ ಮಧ್ಯೆ ಗುಂಡಿನ ಚಕಮಕಿ ನಡೆಯುತ್ತಿದ್ದು, ಪ್ರದೇಶವನ್ನ ಯೋಧರು ಸುತ್ತುವರೆದಿದ್ದಾಗಿ ತಿಳಿದು ಬಂದಿದೆ. ಇನ್ನು ಲಭ್ಯವಾಗಿರುವ ಮಾಹಿತಿ ಪ್ರಕಾರ ಒಂದು ದಿನ ಮುಂಚಿತವಾಗಿಯೇ ಐಇಡಿ ಬ್ಲಾಸ್ಟ್​ ಆಗುವ ಮಾಹಿತಿ ಲಭ್ಯವಾಗಿತ್ತು ಎಂದು ತಿಳಿದು ಬಂದಿದೆ.

ABOUT THE AUTHOR

...view details