ಮಲ್ಕಂಗಿರಿ(ಒಡಿಶಾ):ಬಡವರು, ಕಷ್ಟಪಟ್ಟು ದುಡಿಯುವವರು ಸೇರಿ ವಿವಿಧ ವರ್ಗದವರಿಗೆ ಈಗಾಗಲೇ ಸಹಾಯ ಮಾಡಿರುವ ಉದ್ಯಮಿ ಆನಂದ್ ಮಹೀಂದ್ರಾ ಇದೀಗ ಅಂಗನವಾಡಿ ಕಾರ್ಯಕರ್ತರ ಸಹಾಯಕ್ಕೆ ಮುಂದಾಗಿದ್ದಾರೆ.
ಒಡಿಶಾದ ಇಬ್ಬರು ಅಂಗನವಾಡಿ ಕಾರ್ಮಿಕರಿಗೆ ಸಹಾಯ ಮಾಡಲು ಅವರು ಮುಂದಾಗಿದ್ದಾರೆ. ನಿತ್ಯ ಅಪಾಯಕಾರಿ ನದಿ ದಾಟಿ ಇವರು ಕೆಲಸಕ್ಕೆ ಹೋಗುತ್ತಿದ್ದರು. ಮಲ್ಕಂಗಿರಿ ಜಿಲ್ಲೆಯ ಸ್ವಾಭಿಮಾನ್ ಪ್ರದೇಶದ ರಾಲೆಗಡ ಗ್ರಾಮ ಪಂಚಾಯ್ತಿ ಅಡಿ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಇಬ್ಬರು ಕಾರ್ಮಿಕರು ಪ್ರಾಣ ಪಣಕ್ಕಿಟ್ಟು ಕೆಲಸ ಮಾಡ್ತಿದ್ದರು.
ಇವರ ಅವ್ಯವಸ್ಥೆ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿತ್ತು. ಇದರ ಮಾಹಿತಿ ತಿಳಿದುಕೊಂಡ ಆನಂದ್ ಮಹೀಂದ್ರಾ ತನ್ನ ಸಿಎಸ್ಆರ್ ನಿಧಿಯಿಂದ ಅವರಿಗೆ ಗಾಳಿ ತುಂಬಿದ ಎರಡು ದೋಣಿ ಒದಗಿಸಲು ನಿರ್ಧರಿಸಿದ್ದಾರೆ.
ಅಂಗನವಾಡಿ ಕಾರ್ಮಿಕರ ಸಹಾಯಕ್ಕೆ ಮುಂದಾದ ಆನಂದ್ ಮಹೀಂದ್ರಾ ಮಳೆಗಾಲದ ಸಮಯದಲ್ಲಿ ಕರ್ತವ್ಯ ನಿರ್ವಹಿಸಲು ಇವರು ಅಪಾಯಕಾರಿ ನಾಲೆಯಲ್ಲಿ ದಾಟಿ ಕೆಲಸಕ್ಕೆ ಹಾಜರಾಗುತ್ತಿದ್ದರು. ಇದರ ಬಗ್ಗೆ ಈಟಿವಿ ಭಾರತ್ ಕೂಡ ವರದಿ ಮಾಡಿತ್ತು. ಖಾಲಿ ಮಡಿಕೆಗಳನ್ನ ಸೋಂಟಕ್ಕೆ ಕಟ್ಟಿ ನಾಲೆ ದಾಟುತ್ತಿದ್ದರು. ಗೋದಾವರಿಯ ಉಪನದಿಯಾಗಿರುವ ನುಲ್ಲಾ ಮಾಲಿಗಡು ನದಿ ಅತ್ಯಂತ ವಿಶ್ವಾಸಘಾತುಕ ಎಂದು ಪರಿಗಣಿಸಲಾಗಿದೆ.
ಅಂಗನವಾಡಿ ಕಾರ್ಮಿಕರಾಗಿರುವ ಹೇಮಲತಾ ಹಾಗೂ ಆಕೆಯ ಸಹೋದ್ಯೋಗಿ ಪ್ರೀಮಿಳಾ ಕಿಲೋ ಮೀಟರ್ ದೂರ ನಡೆದು, ತದನಂತರ ನದಿ ದಾಟುತ್ತಿದ್ದರು. ಈಗಾಗಲೇ ನದಿಗೆ 80 ಮೀಟರ್ ಉದ್ದದ ಸೇತುವೆ ನಿರ್ಮಾಣ ಮಾಡಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಆದರೆ ಇಲ್ಲಿಯವರೆಗೆ ಅದಕ್ಕೆ ಕಾಲ ಕೂಡಿ ಬಂದಿಲ್ಲ.