ರಜೌರಿ (ಜಮ್ಮು ಕಾಶ್ಮೀರ): ಭಾರತದ ಗಡಿಯಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ, ಅಪ್ರಚೋದಿತ ಗುಂಡಿನ ದಾಳಿ ನಡೆಸಿದ ಕಾರಣ ಓರ್ವ ಯೋಧ ಹುತಾತ್ಮನಾಗಿದ್ದು, ಮತ್ತೋರ್ವ ಯೋಧ ಗಾಯಗೊಂಡಿದ್ದಾನೆ.
ಕದನ ವಿರಾಮ ಉಲ್ಲಂಘಿಸಿ ಮತ್ತೆ ಕೆಣಕುತ್ತಿರುವ 'ಪಾಪಿ'ಸ್ತಾನ; ಓರ್ವ ಯೋಧ ಹುತಾತ್ಮ
ಪಾಕಿಸ್ತಾನ ಮತ್ತೆ ಭಾರತವನ್ನು ಕೆಣಕುತ್ತಿದೆ. ಇವತ್ತು ಮತ್ತೆ ಕದನ ವಿರಾಮ ಉಲ್ಲಂಘಿಸಿ, ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಈ ದಾಳಿಯಲ್ಲಿ ಓರ್ವ ಯೋಧ ಹುತಾತ್ಮನಾಗಿದ್ದಾನೆ.
ಕದನ ವಿರಾಮ ಉಲ್ಲಂಘನೆ
ರಜೌರಿ ಜಿಲ್ಲೆಯ ಮಂಜಕೋಟೆ ಸೆಕ್ಟರ್‌ನಲ್ಲಿ ಪಾಕಿಸ್ತಾನ ಸೇನೆ ಗುಂಡು ಮತ್ತು ಶೆಲ್ ದಾಳಿ ಮಾಡುವ ಮೂಲಕ ಕದನ ವಿರಾಮ ಉಲ್ಲಂಘನೆ ಮಾಡಿದೆ. ಗಾಯಾಳು ಯೋಧನ ಬಲ ಭುಜಕ್ಕೆ ಗಾಯವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಬುಧವಾರ ರಾತ್ರಿ 10ರಿಂದ 11 ಗಂಟೆ ನಡುವೆ ಪೂಂಚ್ ಹಾಗೂ ಕತುವಾ ಜಿಲ್ಲೆಗಳ ಕೇರಿ, ಬಾಲ್ಕೋಟ್ ಮತ್ತು ಕರೋಲ್ ಮೈತ್ರಾನ್ ಪಾಕ್ ಕದನ ವಿರಾಮ ಉಲ್ಲಂಘನೆ ನಡೆಸಿದೆ. ಅಷ್ಟೇ ಅಲ್ಲದೇ, ಬುಧವಾರ ಬೆಳಗ್ಗೆಯೂ ಕೂಡಾ ನೌಶೇರಾ ವಲಯದಲ್ಲಿ ಸಾರ್ವಜನಿಕರ ಮನೆಗಳನ್ನು ಗುರಿಯಾಗಿ ಪಾಕ್ ದಾಳಿ ನಡೆಸಿತ್ತು.