ಕರ್ನಾಟಕ

karnataka

ETV Bharat / bharat

ಶಾ-ದೋವಲ್ ಮಹತ್ವದ ಸಭೆ: ಕಾಶ್ಮೀರದ ಪ್ರಸ್ತುತ ಪರಿಸ್ಥಿತಿ ಕುರಿತು ಚರ್ಚೆ

ಅಮಿತ್​ ಶಾ, ಜಮ್ಮು ಕಾಶ್ಮೀರದ ಇತ್ತೀಚಿನ ಪರಿಸ್ಥಿತಿ ಕುರಿತು ಚರ್ಚಿಸಲು ನಡೆಸಿದ ಮಹತ್ವದ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೆ ಸಾಥ್​ ನೀಡಿದರು.

ಶಾ-ದೋವಲ್ ಮಹತ್ವದ ಸಭೆ: ಕಾಶ್ಮೀರದ ಪ್ರಸ್ತುತ ಪರಿಸ್ಥಿತಿ ಕುರಿತು ಚರ್ಚೆ

By

Published : Aug 19, 2019, 6:30 PM IST

Updated : Aug 19, 2019, 6:56 PM IST

ನವದೆಹಲಿ:ಜಮ್ಮು ಕಾಶ್ಮೀರದ ಇತ್ತೀಚಿನ ಪರಿಸ್ಥಿತಿ ಕುರಿತು ಚರ್ಚಿಸಲು ಗೃಹ ಸಚಿವ ಅಮಿತ್ ಶಾ ನಡೆಸಿದ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪಾಲ್ಗೊಂಡಿದ್ದರು. ಇನ್ನೂ ಜಮ್ಮು ಕಾಶ್ಮೀರದ ಸದ್ಯದ ಪರಿಸ್ಥಿತಿ ತಿಳಿಯಲು ನಡೆದ ಈ ಸಭೆಯನ್ನು ಪ್ರಮುಖವೆಂದು ಪರಿಗಣಿಸಲಾಗುತ್ತಿದೆ.

ಶಾ-ದೋವಲ್ ಮಹತ್ವದ ಸಭೆ: ಕಾಶ್ಮೀರದ ಪ್ರಸ್ತುತ ಪರಿಸ್ಥಿತಿ ಕುರಿತು ಚರ್ಚೆ

ವಿಶೇಷವೆಂದರೆ, ಕಳೆದ ಕೆಲವು ದಿನಗಳಿಂದ ದೋವಲ್ ಕಣಿವೆ ರಾಜ್ಯದಲ್ಲಿಯೇ ಇದ್ದು, ಕಾಶ್ಮೀರದ ಸ್ಥಿತಿ-ಗತಿಗಳನ್ನು ಪರಿಶೀಲಿಸಿ, ಎರಡು ದಿನಗಳ ಹಿಂದೆಯಷ್ಟೇ ದೆಹಲಿಗೆ ಮರಳಿದ್ದಾರೆ.

ಇನ್ನೂ ಗೃಹ ಸಚಿವಾಲಯದಲ್ಲಿ ನಡೆದ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ ಹಲವು ಪ್ರಮುಖ ಅಧಿಕಾರಿಗಳು ಸಹ ಭಾಗವಹಿಸಿದ್ದರು.

370ನೇ ವಿಧಿಯನ್ನು ರದ್ದುಗೊಳಿಸಿದಾಗಿನಿಂದ ಅಲ್ಲಿನ ಪರಿಸ್ಥಿತಿ ಸೂಕ್ಷ್ಮವಾಗಿದೆ. ಈ ಹಿನ್ನಲೆ ಮುನ್ನೆಚ್ಚರಿಕಾ ಕ್ರಮವಾಗಿ ಕಣಿವೆಯಲ್ಲಿ ಫೋನ್, ಇಂಟರ್ನೆಟ್ ಸೇವೆಗಳನ್ನು ಸರ್ಕಾರ ಸ್ಥಗಿತಗೊಳಿಸಿದೆ.

Last Updated : Aug 19, 2019, 6:56 PM IST

ABOUT THE AUTHOR

...view details