ಕರ್ನಾಟಕ

karnataka

ETV Bharat / bharat

ಅಯೋಧ್ಯೆಗೆ ಇಂದಿರಾ 2.0.. ಇವತ್ತು ಭರ್ಜರಿ ರೋಡ್‌ ಶೋ..  ಎಲ್ಲರ ಚಿತ್ತ ಪ್ರಿಯಾಂಕಾ ಗಾಂಧಿಯತ್ತ.. - etv bharat

ದೇಶದ ಏಕೈಕ ಮಹಿಳಾ ಪ್ರಧಾನಿ, ಅಜ್ಜಿ ಇಂದಿರಾ ಗಾಂಧಿ ಹೋಲುವ ಪ್ರಿಯಾಂಕಾ, ಅವರಂತೆಯೇ ನೇರವಾಗಿ ಜನರ ಜತೆಗೆ ಬೆರೆಯುತ್ತಿದ್ದಾರೆ. ಇದು ಮತದಾರರ ಮೇಲೆ ಸಾಕಷ್ಟು ಪ್ರಭಾವ ಬೀರುತ್ತಿದೆ. ಇವತ್ತು ಅಯೋಧ್ಯೆಯಲ್ಲಿ ಪ್ರಿಯಾಂಕಾ ರೋಡ್‌ ಶೋ ನಡೆಸುತ್ತಿರುವುದರಿಂದ ಎಲ್ಲರ ಚಿತ್ತ ಅದರತ್ತಲೇ ನೆಟ್ಟಿದೆ.

ಪ್ರಿಯಾಂಕಾ ಗಾಂಧಿ

By

Published : Mar 29, 2019, 10:29 AM IST

ಅಯೋಧ್ಯೆ: ಗಂಗಾ ಯಾತ್ರೆ ಕೈಗೊಂಡು ಮತದಾರರನ್ನ ಇಂಪ್ರೆಸ್‌ ಮಾಡಿದ್ದ ಕಾಂಗ್ರೆಸ್‌ ಮುಖಂಡೆ ಪ್ರಿಯಾಂಕಾ ಗಾಂಧಿ ಇವತ್ತು ಯುಪಿಯ ಅಯೋಧ್ಯೆಯಲ್ಲಿ ಭರ್ಜರಿ ರೋಡ್‌ಶೋ ನಡೆಸಲಿದ್ದಾರೆ. ತಾವು ಪ್ರಚಾರಕ್ಕೆ ಹೋಗುವ ಸ್ಥಳದಲ್ಲಿ ಈಗಾಗಲೇ ಎಲ್ಲ ಧಾರ್ಮಿಕ ಕೇಂದ್ರಗಳಿಗೂ ಭೇಟಿ ನೀಡುತ್ತಿರುವ ಪ್ರಿಯಾಂಕಾ, ಈಗ ಅಯೋಧ್ಯೆಗೆ ಭೇಟಿ ನೀಡ್ತಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

ಪ್ರಿಯಾಂಕಾ ಗಾಂಧಿ ಬರೀ ಚುನಾವಣಾ ಱಲಿಗಳಿಗಷ್ಟೇ ಸೀಮಿತವಾಗದೇ ನೇರವಾಗಿ ಜನರ ಜತೆಗೆ ಬೆರೆಯುತ್ತಿದ್ದಾರೆ. ಇದರಿಂದಾಗಿ ಅವರು ಹೋದಲೆಲ್ಲ ಸಾಕಷ್ಟು ಜನ ಸೇರುತ್ತಿದ್ದಾರೆ. ದೇಶದ ಏಕೈಕ ಮಹಿಳಾ ಪ್ರಧಾನಿ, ಅಜ್ಜಿ ಇಂದಿರಾ ಗಾಂಧಿ ಹೋಲುವ ಪ್ರಿಯಾಂಕಾ, ಅವರಂತೆಯೇ ನೇರವಾಗಿ ಜನರ ಜತೆಗೆ ಬೆರೆಯುತ್ತಿದ್ದಾರೆ. ಇದು ಮತದಾರರ ಮೇಲೆ ಸಾಕಷ್ಟು ಪ್ರಭಾವ ಬೀರುತ್ತಿದೆ. ಇವತ್ತು ಅಯೋಧ್ಯೆಯಲ್ಲಿ ಪ್ರಿಯಾಂಕಾ ರೋಡ್‌ ಶೋ ನಡೆಸುತ್ತಿರುವುದರಿಂದ ಎಲ್ಲರ ಚಿತ್ತ ಅದರತ್ತಲೇ ನೆಟ್ಟಿದೆ.

ಇದೇ ವೇಳೆ ಇವತ್ತು ಹರಿಯಾಣದ ಸಿಎಂ ಮನೋಹರ್‌ ಲಾಲ್ ಖಟ್ಟರ್‌ ತವರು ಕ್ಷೇತ್ರ ಕರ್ನಲ್‌ನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ರೋಡ್‌ಶೋ ಜತೆಗೆ ಸಾರ್ವಜನಿಕ ಪ್ರಚಾರ ಸಭೆಗಳನ್ನ ನಡೆಸಲಿದ್ದಾರೆ. ಬಿಜೆಪಿ ಕೋಟೆಯೊಳಗೆ ರಾಹುಲ್ ಗುಡುಗಲಿದ್ದಾರೆ. ಪ್ರಧಾನಿ ನರೇಂದ್ರ ಒಡಿಶಾ, ಆಂಧ್ರ ಮತ್ತು ತೆಲಂಗಾಣದಲ್ಲಿ ಪ್ರಚಾರ ಭಾಷಣ ನಡೆಸಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಪಶ್ಚಿಮ ಬಂಗಾಳ ಮತ್ತು ಬಿಹಾರದ ಔರಂಗಬಾದ್‌ನಲ್ಲಿ ಪ್ರಚಾರ ಸಭೆ ನಡೆಸಲಿದ್ದಾರೆ.

ABOUT THE AUTHOR

...view details