ನವದೆಹಲಿ:ಮಹಾಮಾರಿ ಕೊರೊನಾ ವಿರುದ್ಧ ಇಲ್ಲಿಯವರೆಗೆ ಯಾವುದೇ ದೇಶಗಳು ಲಸಿಕೆ ಕಂಡು ಹಿಡಿದಿಲ್ಲ. ಆದರೆ ಅನೇಕ ದೇಶಗಳಿಂದ ಲಸಿಕೆ ಮೇಲಿನ ಪ್ರಯೋಗ ಮುಂದುವರೆದಿದ್ದು, ಭಾರತ ಕೂಡ ಅದರಿಂದ ಹಿಂದೆ ಬಿದ್ದಿಲ್ಲ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಆಲ್ ಇಂಡಿಯಾ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(ಏಮ್ಸ್) ಡೈರೆಕ್ಟರ್ ಡಾ.ರಂದೀಪ್ ಗುಲೇರಿಯಾ, 2021ರ ಜನವರಿ ವೇಳೆಗೆ ಭಾರತದಲ್ಲಿ ಕೋವಿಡ್ ಲಸಿಕೆ ಲಭ್ಯವಾಗಲಿದೆ ಎಂದಿದ್ದಾರೆ. ಆದರೆ, ಎಲ್ಲವೂ ಅಂದುಕೊಂಡಿರುವ ಹಾಗೇ ನಡೆದರೆ ಮಾತ್ರ ಇದು ಸಾಧ್ಯ ಎಂದು ತಿಳಿಸಿದ್ದಾರೆ.
ಕೋವಿಡ್ ಲಸಿಕೆ ಕಂಡು ಹಿಡಿಯುವ ಕೆಲಸ ಮುಂದುವರೆದಿದ್ದು, ಎಲ್ಲವೂ ಯೋಜನೆ ಪ್ರಕಾರ ನಡೆದರೆ ಜನವರಿ ವೇಳೆಗೆ ಮಾರುಕಟ್ಟೆಗೆ ಈ ಔಷಧ ಸಿಗಲಿದೆ ಎಂದಿದ್ದಾರೆ. ಇದರ ಜತೆಗೆ ದೇಶದ ಜನರಿಗೆ ಏಕಕಾಲದಲ್ಲಿ ಲಭ್ಯವಾಗುವಷ್ಟು ಔಷಧ ಉತ್ಪನ್ನ ಮಾಡುವುದು ಹಾಗೂ ವಿತರಣೆ ಮಾಡುವುದು ಸಾಧ್ಯವಾಗದ ಮಾತು ಎಂಬ ಮಾತು ಸಹ ಹೇಳಿದ್ದಾರೆ.
ಆರಂಭದಲ್ಲಿ ಕೋವಿಡ್ನಿಂದ ಅತಿ ಹೆಚ್ಚು ತೊಂದರೆಗೊಳಗಾಗುತ್ತಿರುವವರಿಗೆ ಈ ಲಸಿಕೆ ನೀಡಲಾಗುವುದು ಎಂದಿರುವ ಅವರು, ಹೆಲ್ತ್ಕೇರ್ ಸಿಬ್ಬಂದಿ, ಕೊರೊನಾ ವಾರಿಯರ್ಸ್ಗೆ ನೀಡಲಾಗುವುದು ಎಂದಿದ್ದಾರೆ. ಮಹಾಮಾರಿ ಕೊರೊನಾ ವೈರಸ್ನಿಂದ ದೂರ ಇರಬೇಕಾದರೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮಾರ್ಗಸೂಚಿ ಕಡ್ಡಾಯವಾಗಿ ಪಾಲನೆ ಮಾಡಬೇಕಾಗಿದೆ. ದೇಶದಲ್ಲಿ ಕಳೆದ ಕೆಲ ದಿನಗಳಿಂದ ಅತಿ ಹೆಚ್ಚು ಕೊರೊನಾ ಕೇಸ್ಗಳು ಕಾಣಿಸಿಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಇಂದು ಮುಂದುವರೆದರೆ ದೇಶದಲ್ಲಿ ಮತ್ತಷ್ಟು ಆತಂಕ ಸೃಷ್ಟಿಯಾಗಲಿದೆ ಎಂದಿದ್ದಾರೆ.