ಕರ್ನಾಟಕ

karnataka

ETV Bharat / bharat

ಬಿಜೆಪಿ ಸೇರಿದ ಎಐಎಡಿಎಂಕೆ ಮುಖಂಡ ವಿ.ವಿ. ಸೆಂಥಿಲ್​ನಾಥನ್

ಎಐಎಡಿಎಂಕೆ ಮುಖಂಡ ವಿ.ವಿ. ಸೆಂಥಿಲ್​ನಾಥನ್ ತಮಿಳುನಾಡಿನ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಎಲ್. ಮುರುಗನ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

VV Senthilnathan
ವಿ.ವಿ. ಸೆಂಥಿಲ್​ನಾಥನ್

By

Published : Jan 29, 2021, 6:34 AM IST

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ, ಎಐಎಡಿಎಂಕೆ ಮುಖಂಡ ವಿ.ವಿ. ಸೆಂಥಿಲ್​ನಾಥನ್ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಎಐಎಡಿಎಂಕೆ ಮೈತ್ರಿ ಪಾಲುದಾರ ಬಿಜೆಪಿ.

ಸೆಂಥಿಲ್​ನಾಥನ್ ಅವರು ರಾಜ್ಯಾಧ್ಯಕ್ಷ ಮತ್ತು ತಮಿಳುನಾಡಿನ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಎಲ್. ಮುರುಗನ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸೆಂಥಿಲ್​ನಾಥನ್, "ದ್ರಾವಿಡ ಶಾಲಿಗಿಂತ ಈ ಕೇಸರಿ ಶಾಲನ್ನು ನನ್ನ ಹೆಗಲ ಮೇಲೆ ಇಟ್ಟುಕೊಳ್ಳಲು ನನಗೆ ತುಂಬಾ ಸಂತೋಷವಾಗುತ್ತಿದೆ. ಪ್ರಧಾನಿ ಮೋದಿ ಮತ್ತು ಅವರ ಕಾರ್ಯಗಳಿಂದ ನಾನು ಸ್ಪೂರ್ತಿ ಪಡೆದಿದ್ದೇನೆ" ಎಂದರು.

ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳ ಚುನಾವಣೆ ಈ ವರ್ಷ ನಡೆಯಲಿದೆ.

ABOUT THE AUTHOR

...view details