ಕರ್ನಾಟಕ

karnataka

ETV Bharat / bharat

50 ವರ್ಷ ಹಳೆಯ ಡ್ಯಾಂಗಳಿಂದ ಭಾರತಕ್ಕಿದ್ಯಾ ಕಂಟಕ?

ಭಾರತದಲ್ಲಿ ಮುಂಬರುವ 2025ಕ್ಕೆ 1115 ಡ್ಯಾಂಗಳು 50 ವರ್ಷಗಳಷ್ಟು ಹಳೆಯದಾಗುತ್ತವೆ. 4250 ಡ್ಯಾಂಗಳು ಮುಂಬರುವ 2050ಕ್ಕೆ 50 ವರ್ಷ ಹಳೆಯದಾಗುತ್ತವೆ..

50 ವರ್ಷ ಹಳೆಯ ಡ್ಯಾಂಗಳಿಂದ ಭಾರತಕ್ಕಿದ್ಯಾ ಕಂಟಕ?
50 ವರ್ಷ ಹಳೆಯ ಡ್ಯಾಂಗಳಿಂದ ಭಾರತಕ್ಕಿದ್ಯಾ ಕಂಟಕ?

By

Published : Jan 24, 2021, 4:03 PM IST

ಭಾರತವನ್ನು ಕೃಷಿ ಆಧಾರಿತ ದೇಶ ಎಂದು ಕರೆಯಲಾಗಿದೆ. ಇದೇ ಹಿನ್ನೆಲೆಯಲ್ಲಿ ಪುರಾತನ ಕಾಲದಿಂದಲೂ ಈ ದೇಶಕ್ಕೆ ಬೇಕಾಗುವ ನೀರಿನ ವ್ಯವಸ್ಥೆಯನ್ನು ಮಾಡುತ್ತ, ದೊಡ್ಡ ದೊಡ್ಡ ಅಣೆಕಟ್ಟೆಗಳನ್ನು ಕಟ್ಟಲಾಗಿದೆ. ನೀರು ಪೂರೈಕೆಗೆಂದು ಕಟ್ಟಲಾಗಿರುವ ಅಣೆಗಟ್ಟೆಗಳ ಸಂಖ್ಯೆ ಹೆಚ್ಚಾಗುತ್ತಲೇ ಹೋಗಿದೆ. ಅಲ್ಲದೆ ಇದು ಮುಂದಿನ ದಿನಗಳಲ್ಲಿ ತೊಂದರೆಗೆ ದಾರಿ ಮಾಡಿಕೊಡುತ್ತದೆ ಎಂಬ ವರದಿಯನ್ನು UN ಸಂಸ್ಥೆ ನೀಡಿದೆ.

ಪ್ರಪಂಚದಲ್ಲಿ ಬೃಹತ್​​ ಅಣೆಕಟ್ಟುಗಳನ್ನು ಹೊಂದಿರುವ ದೇಶಗಳ ಪೈಕಿ ಭಾರತವೂ ಒಂದು. ಇಲ್ಲಿರುವ ಬಹುಪಾಲು ಡ್ಯಾಂಗಳು ಮುಂಬರುವ 2025ಕ್ಕೆ 50 ವರ್ಷಗಳನ್ನು ಪೂರೈಸುತ್ತವೆ. ಅಂದ್ರೆ ಆ ಡ್ಯಾಂಗಳನ್ನು ನಿರ್ಮಾಣ ಮಾಡಿ 50 ವರ್ಷ ಕಳೆಯುತ್ತದೆ ಎಂದು ವರದಿ ತಿಳಿಸಿದೆ. ಮತ್ತೊಂದು ಮಾಹಿತಿಯನ್ನು ನೀಡಿದ್ದು, 2050ನೇ ಇಸವಿಗೆ ನಾವು ತಲುಪುವಷ್ಟರಲ್ಲಿ ಭೂಮಿಯ ಬಹುಪಾಲು ಜನ 20ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಡ್ಯಾಮ್​​​ ಪ್ರದೇಶದಲ್ಲಿ ವಾಸ ಮಾಡಬೇಕಾದ ಪರಿಸ್ಥಿತಿ ಇದೆ ಎಂದಿದೆ.

ಅಮೆರಿಕಾದ ಒಂದು ಸಂಸ್ಥೆ ಹೇಳುವ ಪ್ರಕಾರ ಪ್ರಪಂಚದಲ್ಲಿ ಸುಮಾರು 58,700 ದೊಡ್ಡ ದೊಡ್ಡ ಡ್ಯಾಂಗಳು 20ನೇ ಶತಮಾದಲ್ಲಿ ನಿರ್ಮಾಣವಾಗಿದ್ದು, ಹಳೆಯದಾಗಿವೆ ಎಂದಿದೆ. ಇದ್ರಲ್ಲಿ 1930 ರಿಂದ 1970ರ ಅವಧಿಯಲ್ಲಿ ನಿರ್ಮಾಣವಾದ ಡ್ಯಾಂಗಳಿದ್ದು, ಇವುಗಳಲ್ಲಿ ಕೆಲವು 50 ವರ್ಷಗಳನ್ನು ಪೂರೈಸಿದ್ರೆ, ಇನ್ನು ಕೆಲವು 100 ವರ್ಷಗಳನ್ನೇ ಪೂರೈಸಿವೆ.

ವರದಿಯ ಪ್ರಕಾರ ಕಾಂಕ್ರಿಟ್​​ನಿಂದ ನಿರ್ಮಾಣವಾದ ಯಾವುದೇ ಅಣೆಕಟ್ಟೆ ಕೂಡ 50 ವರ್ಷ ದಾಟಿದ ಬಳಿಕ ತನ್ನ ಶಕ್ತಿ ಕಳೆದುಕೊಳ್ಳುತ್ತಾ ಹೋಗುತ್ತದೆ ಎಂದು ತಿಳಿಸಿದೆ. ಮತ್ತೊಂದು ಆಶ್ಚರ್ಯಕರ ಸಂಗತಿ ಅಂದ್ರೆ ಪ್ರಪಂಚದಲ್ಲಿರುವ ಡ್ಯಾಂಗಳ ಪೈಕಿ ಶೇ.55ರಷ್ಟು ಡ್ಯಾಂಗಳನ್ನು ಕೇವಲ ನಾಲ್ಕು ದೇಶಗಳಲ್ಲಿ ಕಾಣಬಹುದು. ಚೀನಾ, ಭಾರತ, ಜಪಾನ್​​ ಮತ್ತು ದಕ್ಷಿಣ ಕೊರಿಯಾ ದೇಶಗಳಲ್ಲಿ ಬರೋಬ್ಬರಿ 32,716 ಡ್ಯಾಂಗಳಿದ್ದು, ಅತೀ ಶೀಘ್ರದಲ್ಲಿ ಇವು ತಮ್ಮ 50 ವರ್ಷಗಳನ್ನು ಪೂರೈಸಿ ತುಂಬಾ ಹಳೆಯದಾಗುತ್ತವೆ.

ಇನ್ನು, ಭಾರದ ವಿಚಾರವನ್ನು ನೋಡೊದಾದ್ರೆ ಮುಂಬರುವ 2025ಕ್ಕೆ 1115 ಡ್ಯಾಂಗಳು 50 ವರ್ಷಗಳಷ್ಟು ಹಳೆಯದಾಗುತ್ತವೆ. 4250 ಡ್ಯಾಂಗಳು ಮುಂಬರುವ 2050ಕ್ಕೆ 50 ವರ್ಷ ಹಳೆಯದಾಗುತ್ತವೆ. ಅಲ್ಲದೆ 2050ಕ್ಕೆ 64 ಅತೀ ಬೃಹತ್​​ ಅಣೆಕಟ್ಟೆಗಳು 150 ವರ್ಷಗಳಷ್ಟು ಹಳೆಯದಾಗುತ್ತವೆ. ವರದಿ ಹೇಳುವ ಪ್ರಕಾರ 3.5 ಮಿಲಿಯನ್​​ ಜನತೆ ಕೇರಳದ ಮುಲ್ಲಪೆರಿಯಾರ್​ ಡ್ಯಾಂನ ಸಂಕಷ್ಟದಲ್ಲಿದ್ದಾರೆ. ಈ ಅಣೆಕಟ್ಟೆ ನಿರ್ಮಾಣ ಮಾಡಿ ಬರೋಬ್ಬರಿ 100 ವರ್ಷಗಳೆ ಕಳೆದಿದೆ.

ತಮಗೆ ಬೇಕಾದಾಗ ಡ್ಯಾಂಗಳನ್ನು ನಿರ್ಮಾಣ ಮಾಡಿಕೊಂಡಿರುವ ದೇಶಗಳು ಇದೀಗ ಅವುಗಳಿಂದಲೇ ಸಂಕಷ್ಟ ಎದುರಿಸುತ್ತಿವೆ. ಡ್ಯಾಂಗಳು ತುಂಬಾ ಹಳೆಯದಾಗುತ್ತಿದ್ದಂತೆ ಅದರಿಂದಾಗುವ ಅಪಾಯಗಳೇ ಹೆಚ್ಚು. ಅಕಸ್ಮಾತ್​ ಒಂದು ಅಣೆಕಟ್ಟು ಒಡೆಯಿತು ಅಂದ್ರೆ ಲಕ್ಷಾಂತರ ಜನ ಜೀವನ ನಾಶವಾಗುತ್ತದೆ.

ವರದಿಗಳು ಹಾಗು ಅಧ್ಯಯನಗಳು ಕೆಲವು ಅಂಶಗಳನ್ನು ಸೂಚಿಸಿದ್ದು, ಅಣೆಕಟ್ಟುಗಳನ್ನು ಕಟ್ಟುವುದು ಎಷ್ಟು ಮುಖ್ಯವಾಗಿತ್ತೋ ಅಷ್ಟೇ ಕಾಳಜಿ ವಹಿಸಿ ಅವುಗಳನ್ನು ಕಾಪಾಡಿಕೊಂಡು ಹೋಗುವುದು ಮತ್ತು ಕೆಲವುಗನ್ನು ನಿರ್ಮೂಲನೆ ಮಾಡಬೇಕು ಎಂದಿದೆ.

For All Latest Updates

ABOUT THE AUTHOR

...view details