ಕರ್ನಾಟಕ

karnataka

ETV Bharat / bharat

1962ರ ಇಂಡೋ-ಚೀನಾ ವಾರ್​ ಬಳಿಕ ಇದು ಅತ್ಯಂತ ಗಂಭೀರ ಪರಿಸ್ಥಿತಿ: ಜೈಶಂಕರ್​ - ಲಡಾಖ್​

ಲಡಾಖ್​​ನಲ್ಲಿ ಅತ್ಯಂತ ಗಂಭೀರ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್​​.ಜೈಶಂಕರ್​ ಮಾಹಿತಿ ನೀಡಿದ್ದಾರೆ.

Jaishankar
Jaishankar

By

Published : Aug 27, 2020, 3:35 PM IST

ನವದೆಹಲಿ:ಪೂರ್ವ ಲಡಾಕ್​ನಲ್ಲಿ ಭಾರತ - ಚೀನಾ ನಡುವೆ ಸಂಘರ್ಷ ನಡೆದು, ಅನೇಕ ಯೋಧರು ಹುತಾತ್ಮರಾಗಿದ್ದು, ಇದೇ ವಿಷಯವಾಗಿ ಕೇಂದ್ರ ವಿದೇಶಾಂಗ ಸಚಿವ ಎಸ್​.ಜೈಶಂಕರ್​ ಮಾತನಾಡಿದ್ದಾರೆ. 1962ರ ಬಳಿಕ ಅತ್ಯಂತ ಗಂಭೀರ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ಹೇಳಿದ್ದಾರೆ.

1962ರಲ್ಲಿ ಭಾರತ - ಚೀನಾ ನಡುವೆ ಯುದ್ಧ ನಡೆದ ಬಳಿಕ ಇದೇ ಮೊದಲ ಬಾರಿಗೆ ಪೂರ್ವ ಲಡಾಖ್​ನಲ್ಲಿ ಇಂತಹ ಸ್ಥಿತಿ ನಿರ್ಮಾಣಗೊಂಡಿದ್ದು, 45 ವರ್ಷದ ನಂತರ ಗಡಿಯಲ್ಲಿ ಸಾವು-ನೋವು ಸಂಭವಿಸಿದ್ದು ನಾವು ನೋಡಿದ್ದೇವೆ ಎಂದಿದ್ದಾರೆ.

ಪೂರ್ವ ಲಡಾಖ್​ ವಿಚಾರವಾಗಿ ಈಗಾಗಲೇ ಉಭಯ ದೇಶಗಳ ನಡುವೆ ಮಿಲಿಟರಿ ಸೇರಿದಂತೆ ಅನೇಕ ರಾಜತಾಂತ್ರಿಕ ಸಭೆ ನಡೆದಿದ್ದು, ಯಾವುದೇ ರೀತಿಯ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಜೂನ್​​ 15ರಂದು ಗಲ್ವಾನ್​ ವ್ಯಾಲಿ ಪ್ರದೇಶದಲ್ಲಿ ಉಭಯ ದೇಶಗಳ ನಡುವೆ ನಡೆದ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು.

ಗಡಿಯಲ್ಲಿ ನಿರ್ಮಾಣಗೊಂಡಿರುವ ಬಿಕ್ಕಟ್ಟು ಶಮನ ಮಾಡಲು ಸೇನಾ ಆಯ್ಕೆಗಳು ನಮ್ಮ ಮುಂದೆ ಇವೆ ಎಂದು ರಕ್ಷಣಾ ಪಡೆಗಳ ಮುಖ್ಯಸ್ಥರಾಗಿರುವ ಬಿಪಿನ್​ ರಾವತ್​ ಈಗಾಗಲೇ ಹೇಳಿಕೆ ನೀಡಿದ್ದು, ಅದರ ಬೆನ್ನಲ್ಲೇ ಎಸ್​​.ಜೈಶಂಕರ್​​​ ಗಡಿ ಪ್ರದೇಶದಲ್ಲಿ ಚೀನಾದೊಂದಿಗೆ ಉಂಟಾಗಿರುವ ಗಡಿ ಬಿಕ್ಕಟ್ಟು ರಾಜತಾಂತ್ರಿಕ ಮಾತುಕತೆ ಮೂಲಕ ಪರಿಹಾರ ಮಾಡಲು ನಾವು ಸಿದ್ಧ ಎಂದು ಹೇಳಿದ್ದಾರೆ.

ಲೈನ್​ ಆಫ್​ ಆ್ಯಕ್ಚುವಲ್​ ( ಎಲ್​ಎಸಿ) ನಲ್ಲಿ ಸದ್ಯ ಪರಿಸ್ಥಿತಿ ಗಂಭೀರವಾಗಿದ್ದು, ನಮ್ಮ ಗಡಿಯ ಸುರಕ್ಷತೆಗಾಗಿ ನಾವು ಎಲ್ಲ ರೀತಿಯ ಭದ್ರತಾ ಕ್ರಮ ಕೈಗೊಳ್ಳಲು ಸಿದ್ಧ ಎಂದಿದ್ದಾರೆ. ಆದರೆ ಅದಕ್ಕಾಗಿ ಸಂಘರ್ಷದ ಹಾದಿ ಹಿಡಿಯುವುದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.

ABOUT THE AUTHOR

...view details