ಬನಸ್ಕಂತ (ಗುಜರಾತ್):ತಂದೆಯೊಬ್ಬ ತನ್ನ ಮಗನ ಶವವನ್ನು ಸ್ವಚ್ಛ ಭಾರತ ಯೋಜನೆಯಡಿ ನಿರ್ಮಿಸಲಾದ ಶೌಚಾಲಯದಲ್ಲಿ ಬಚ್ಚಿಟ್ಟಿರುವ ವಿಚಿತ್ರ ಘಟನೆ ಬನಸ್ಕಂತ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿ ಆದಿವಾಸಿ ಜನಾಂಗಕ್ಕೆ ಸೇರಿದವನಾಗಿದ್ದು, ಆದಿವಾಸಿ ಜನಾಂಗದಲ್ಲಿ ಈ ರೀತಿ ಸಂಶಯಾಸ್ಪದವಾಗಿ ಮೃತಪಟ್ಟರೆ ನ್ಯಾಯ ದೊರಕುವವರೆಗೂ ಮೃತನ ಅಂತಿಮ ವಿಧಿ-ವಿಧಾನ ಮಾಡುವಂತಿಲ್ಲ.
ತನ್ನ ಮಗನ ಕೊಲೆ ಮಾಡಿರುವ ಆರೋಪಿ ಸಿಗುವವರೆಗೂ ತನ್ನ ಮಗನ ಅಂತಿಮ ವಿಧಿ ವಿಧಾನ ಮಾಡದಿರಲು ನಿರ್ಧರಿಸಿದ್ದಾರೆ. ಹಾಗಾಗಿ ಕಳೆದ 20 ತಿಂಗಳಿನಿಂದ ಮೃತ ಮಗನ ಶವವನ್ನು ದಹನ ಮಾಡದೇ ಶೌಚಾಲಯದಲ್ಲಿಟ್ಟಿದ್ದಾನೆ ಎನ್ನಲಾಗುತ್ತಿದೆ.
20 ತಿಂಗಳುಗಳ ಕಾಲ ಮಗನ ಶವವನ್ನು ಶೌಚಾಲಯದಲ್ಲಿಟ್ಟ ತಂದೆ ನ್ಯಾಯ ಸಿಕ್ಕ ಮೇಲೆ ಅಂತಿಮ ವಿಧಿ-ವಿಧಾನ ನಡೆಸುವುದು ಆದಿವಾಸಿ ಜನಾಂಗದ ಪದ್ಧತೆ. ಈ ಹಿನ್ನೆಲೆಯಲ್ಲಿ ನ್ಯಾಯಕ್ಕಾಗಿ ಪರಿತಪಿಸುತ್ತಿರುವ ಮೃತ ವ್ಯಕ್ತಿಯ ಕುಟುಂಬವು ಜನಾಂಗದ ಪದ್ಧತಿಯಂತೆ ಈ ಕ್ರಮ ಕೈಗೊಂಡಿದ್ದಾಗಿ ತಿಳಿದು ಬಂದಿದೆ.
ಕಳೆದ 20 ತಿಂಗಳಿನಿಂದ ವ್ಯಕ್ತಿಯ ದೇಹವು ಅಸ್ಥಿಪಂಜರವಾಗಿ ಮಾರ್ಪಟ್ಟಿದೆ. ಆದರೆ, ಕುಟುಂಬದ ಒತ್ತಾಯದಂತೆ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು ಪುರಾವೆಗಳ ಕೊರತೆ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಆಕಸ್ಮಿಕ ಸಾವು ಎಂದು ಪರಿಗಣಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.