ಹೈದರಾಬಾದ್: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಕೈಗೊಂಡಿದ್ದ ಚಂದ್ರಯಾನ2 ಯೋಜನೆಯ ಪ್ರಮುಖ ಭಾಗವಾದ ವಿಕ್ರಂ ಲ್ಯಾಂಡರ್ ಕೊನೇ ಕ್ಷಣದಲ್ಲಿಸಂಪರ್ಕ ಕಡಿದುಕೊಂಡಿದೆ.
ನಿಜಕ್ಕೂ ಚಂದ್ರಯಾನ ಯೋಜನೆಯ ಮೂಲ ಉದ್ದೇಶವೇನು? ಚಂದ್ರನ ಮೇಲ್ಮೈ ಅಧ್ಯಯನ ನಡೆಸುವುದಾ? ಅದರಿಂದ ನಮಗೇನು ಪ್ರಯೋಜನ ಎಂದು ನೀವು ಯೋಚಿಸಿರಬಹುದು. ಈ ಎಲ್ಲದರ ಮೂಲ ಉದ್ದೇಶ ಮುಂದಿನ ಶತಮಾನಗಳಿಗಾಗುವಷ್ಟು ವಿದ್ಯುತ್ ಉತ್ಪಾದನೆ ಮಾಡುವ ಗುರಿ.
ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಕನಸು ಚಂದ್ರನ ಮೇಲ್ಮೈ ಮೇಲೆ ಇದೆ ಎನ್ನಲಾದ ಹೀಲಿಯಂ ಕಣಗಳನ್ನು ಭಾರತಕ್ಕೆ ತಂದು ಅದರಿಂದ ವಿದ್ಯುತ್ ತಯಾರಿಸಬೇಕು ಎಂಬುದು.
ಹೀಲಿಯಂ -3 ಧಾತುವು ವಿಕರಣ ಮುಕ್ತವಾಗಿರುವುದರಿಂದ ಇದರಿಂದ ವಿದ್ಯುತ್ ತಯಾರಿಸಿದರೆ ಯಾವುದೇ ಅಪಾಯವಿಲ್ಲ ಎಂಬುದು ವಿಜ್ಞಾನ ಪ್ರಪಂಚಕ್ಕೆ ಗೊತ್ತಿದೆ. ಅದನ್ನು ಬೆನ್ನತ್ತಿ ನಡೆಯುತ್ತಿರುವ ಅಧ್ಯಯನಗಳು ಇವಾಗಿವೆ.
ಒಂದುವೇಳೆ ಚಂದ್ರನ ಮೇಲ್ಮೈ ಮೇಲೆ ಹೀಲಿಯಂ ಇರುವುದು ದೃಢವಾದರೆ ಅಲ್ಲಿಂದ ಗಣಿಗಾರಿಕೆ ಮಾಡಿ ಭಾರತಕ್ಕ ತಂದು ಸಮುದ್ರದ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸಬಹುದು ಎಂಬುದು ವಿಜ್ಞಾನಿಗಳ ಲೆಕ್ಕಾಚಾರವಾಗಿತ್ತು.