ಕರ್ನಾಟಕ

karnataka

ETV Bharat / bharat

ತಾಯಿಗಾಗಿ ಜಿಲ್ಲಾಡಳಿತ ಕಚೇರಿ ಎದುರೇ ಬೆಂಕಿ ಹಚ್ಚಿಕೊಂಡು ಯುವಕ ಆತ್ಮಹತ್ಯೆ!

ಜಿಲ್ಲಾಡಳಿತ ಕಚೇರಿ ಎದುರೇ ಯುವಕನೊಬ್ಬ ಮೈಮೇಲೆ ಪೆಟ್ರೋಲ್​ ಸುರಿದು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯಲ್ಲಿ ನಡೆದಿದೆ.

young man committed suicide, young man committed suicide front of DC office, Anantapur young man committed suicide, ಬೆಂಕಿ ಹಚ್ಚಿಕೊಂಡು ಯುವಕ ಆತ್ಮಹತ್ಯೆ, ಅನಂತಪುರಂನಲ್ಲಿ ಬೆಂಕಿ ಹಚ್ಚಿಕೊಂಡು ಯುವಕ ಆತ್ಮಹತ್ಯೆ, ಜಿಲ್ಲಾಡಳಿತ ಎದುರು ಬೆಂಕಿ ಹಚ್ಚಿಕೊಂಡು ಯುವಕ ಆತ್ಮಹತ್ಯೆ, ಬೆಂಕಿ ಹಚ್ಚಿಕೊಂಡು ಯುವಕ ಆತ್ಮಹತ್ಯೆ ಸುದ್ದಿ,
ತಾಯಿಗಾಗಿ ಜಿಲ್ಲಾಧಿಕಾರಿ ಎದುರೇ ಬೆಂಕಿ ಹಚ್ಚಿಕೊಂಡು ಯುವಕ ಆತ್ಮಹತ್ಯೆ!

By

Published : Oct 13, 2020, 5:42 AM IST

ಅನಂತಪುರಂ:ಇಲ್ಲಿನ ಜಿಲ್ಲಾಡಳಿತ ಭವನ ಎದುರು ಯುವಕನೊಬ್ಬ ಕೆಲ ಅಧಿಕಾರಿಗಳ ಮೇಲೆ ಹಣ ದುರಪಯೋಗ ಪಡಿಸಿಕೊಂಡು ಆರೋಪಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ನನ್ನ ತಾಯಿಯ ಉಳಿತಾಯದ ಹಣವನ್ನು ಇಲ್ಲಿನ ಕೆಲ ಅಧಿಕಾರಿಗಳು ನುಂಗಿ ಖಾಲಿ ಮಾಡಿದ್ದಾರೆ ಎಂದು ನಾರ್ಪಲ ತಾಲೂಕಿನ ಗೂಗೂರು ಗ್ರಾಮದ ನಿವಾಸಿ ರಾಮಕೃಷ್ಣರೆಡ್ಡಿ ಆತ್ಮಹತ್ಯೆಗೂ ಆರೋಪಿಸಿದ್ದರು. ನ್ಯಾಯಕ್ಕಾಗಿ ಜಿಲ್ಲಾಧಿಕಾರಿ ಕಚೇರಿಗೆ ಅಲೆದಾಡಿದ್ದಾರೆ. ಆದ್ರೂ ಯಾವುದೇ ಪ್ರಯೋಜನವಾಗಿಲ್ಲ.

ತಾಯಿಗಾಗಿ ಜಿಲ್ಲಾಧಿಕಾರಿ ಎದುರೇ ಬೆಂಕಿ ಹಚ್ಚಿಕೊಂಡು ಯುವಕ ಆತ್ಮಹತ್ಯೆ!

ಇದರಿಂದ ಬೇಸರಗೊಂಡ ರಾಮಕೃಷ್ಣ ನಿನ್ನೆ ಜಿಲ್ಲಾಡಳಿತ ಕಚೇರಿ ಎದುರು ಎಲ್ಲರು ನೋಡುತ್ತಿದ್ದಂತೆ ಮೈ ಮೇಲೆ ಪೆಟ್ರೋಲ್​ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಕೂಡಲೇ ಸ್ಥಳೀಯರು ರಾಮಕೃಷ್ಣನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ರಾಮಕೃಷ್ಣ ಸಾವನ್ನಪ್ಪಿದ್ದಾನೆ.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details