ಪ್ರಕಾಶಂ(ಆಂಧ್ರಪ್ರದೇಶ):ಪ್ರೀತಿಯಿಂದ ಸಾಕಿದ್ದ ಹಸುವೊಂದು ಏಕಾಏಕಿ ಸಾವನ್ನಪ್ಪಿದ್ದರಿಂದ ಅದರ ಒಡತಿ ಮಗುವಿನಂತೆ ಕಣ್ಣೀರು ಹಾಕಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ.
ಪ್ರೀತಿಯಿಂದ ಸಾಕಿದ್ದ ಹಸು ಸಾವು: ಮಗುವಿನಂತೆ ಕಣ್ಣೀರು ಹಾಕಿದ ಮಹಿಳೆ! - ಹಸು ಸಾಕಿದ್ದ ಮಹಿಳೆಯಿಂದ ಕಣ್ಣೀರು
ಮನೆಗೆ ಆಧಾರವಾಗಿದ್ದ ಹಸುವೊಂದು ಏಕಾಏಕಿ ಸಾವನ್ನಪ್ಪಿದ್ದರಿಂದ ಮಹಿಳೆಯೋರ್ವಳು ಮಗುವಿನಂತೆ ಕಣ್ಣೀರು ಹಾಕಿದ್ದು, ನೋಡುಗರ ಮನ ಕರಗುವಂತಿದೆ.
ಜಾಡಾ ಬಾಲಮ್ಮ ಹಸು ಸಾಕಿರುವ ಮಹಿಳೆ. ಮನೆಗೆ ಆಧಾರಸ್ತಂಭವಾಗಿದ್ದ ಹಸು ಇಂದು ಏಕಾಏಕಿ ಸಾವನ್ನಪ್ಪಿದ್ದರಿಂದ ಕಣ್ಣೀರು ಹಾಕಿದ್ದಾಳೆ. ಲಕ್ಷ್ಮೀ ಹೆಸರಿನ ಹಸು ಇದಾಗಿದ್ದು, ಕಳೆದ ಕೆಲ ವರ್ಷಗಳಿಂದ ಮನೆಗೆ ಆಧಾರವಾಗಿತ್ತು. ಅನಾರೋಗ್ಯದಿಂದ ಕೂಡಿದ್ದ ಹಸು ಉಳಿಸಿಕೊಳ್ಳುವ ಉದ್ದೇಶದಿಂದ ಒಂಗೋಲ್ ನಗರಕ್ಕೆ ಕರೆದುಕೊಂಡು ಹೋಗಿದ್ದಳು. ಇನ್ನು ಕಳೆದ ಕೆಲ ದಿನಗಳ ಹಿಂದೆ ಹಸು ಮುಂದಾದ ಕರುವಿಗೆ ಜನ್ಮ ನೀಡಿತ್ತು. ಈ ವೇಳೆ ವೈದ್ಯರು ಚಿಕಿತ್ಸೆ ನೀಡಿದ್ದರು. ಆದರೆ ಮನೆಗೆ ಕರೆತರುತ್ತಿದ್ದಂತೆ ಅದು ಸಾವನ್ನಪ್ಪಿದೆ.
ಜೀವನಾಧಾರವಾಗಿದ್ದ ಹಸು ಸಾವನ್ನಪ್ಪಿದ್ದರಿಂದ ಬಾಲಮ್ಮ ತೀವ್ರ ದುಃಖಿತಳಾಗಿದ್ದಾನೆ. ಇದರ ಮಾಹಿತಿ ಗೊತ್ತಾಗುತ್ತಿದ್ದಂತೆ ಒಂಗೋಲ್ನ ಮಾಜಿ ಶಾಸಕ ದಮಾಚಾರ್ಲಾ ಜನಾರ್ಧನ್ ರಾವ್ ಬಾಲಮ್ಮಳಿಗೆ 10 ಸಾವಿರ ರೂ. ಆರ್ಥಿಕ ನೆರವು ನೀಡಿದ್ದಾರೆ.