ಕರ್ನಾಟಕ

karnataka

ETV Bharat / bharat

8 ದಿನದಲ್ಲಿ ಮದುವೆ ಇಟ್ಕೊಂಡು ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಶಿಕ್ಷಕ!

ಆತ ಓರ್ವ ಶಿಕ್ಷಕ. ಇನ್ನೇನು 8 ದಿನಗಳಲ್ಲೇ ದಾಂಪತ್ಯಕ್ಕೆ ಕಾಲಿಡುವವನಿದ್ದ. ಇಷ್ಟರಲ್ಲೇ ಪಾಠದ ಹೇಳುವ ನೆಪದಲ್ಲಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಸಾಂದರ್ಭಿಕ ಚಿತ್ರ

By

Published : Jul 23, 2019, 12:40 PM IST

Updated : Jul 23, 2019, 2:42 PM IST

ಮಧುಬನಿ(ಬಿಹಾರ):8 ದಿನಗಳಲ್ಲಿ ಮದುವೆಯಾಗಿ ಸಂಸಾರ ನಡೆಸಬೇಕಿದ್ದ ಶಿಕ್ಷಕನೋರ್ವ ತನ್ನ ಕೆಟ್ಟ ಬುದ್ಧಿಯಿಂದಾಗಿ ಕಂಬಿ ಎಣಿಸುವಂತಾಗಿದೆ. ಬಾಲಕಿಗೆ ಪಾಠ ಹೇಳುವ ನೆಪದಲ್ಲಿ ಶಿಕ್ಷಕ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಮಧುಬನಿ ಜಿಲ್ಲೆಯಲ್ಲಿ ನಡೆದಿದೆ.

ಬಸೈತಾಭಾರಿ ಗ್ರಾಮದ ಅಬ್ದುಲ್​ ಖಯ್ಯಾಂ (23) ಎಂಬಾತ ಐದು ವರ್ಷದ ಹಿಂದೆನೇ ನಗರಕ್ಕೆ ಬಂದಿದ್ದ. ಜಿಎಂ ನಗರದ ಉಸ್ಮಾನಿಯಾ ಘನಿ ಮಸೀದಿಯ ರೂಮ್​ವೊಂದರಲ್ಲಿ ವಾಸಿಸುತ್ತಿದ್ದ. ಎರಡು ವರ್ಷಗಳಿಂದ ಮನೆಯೊಂದಕ್ಕೆ ತೆರಳಿ ಬಾಲಕಿಗೆ ಅರೇಬಿಕ್​ ಭಾಷೆ ಕಲಿಸುತ್ತಿದ್ದ.

ಈ ತಿಂಗಳು 19ರಂದು ಬಾಲಿಕ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಮುಂದಾಗಿದ್ದ. ಈ ವೇಳೆ ಬಾಲಕಿ ಕಿರುಚಿಕೊಂಡಿದ್ದು, ತಾಯಿ ಗಾಬರಿಯಿಂದ ಏನಾಯ್ತು ಅಂತಾ ಕೇಳಿದ್ದಾಳೆ. ಬಾಲಕಿ ಮೊಬೈಲ್​ನಲ್ಲಿನ ವಿಡಿಯೋ ನೋಡಿ ಭಯಪಟ್ಟಿದ್ದಾಳೆ ಎಂದು ಅಬ್ದುಲ್​ ಹೇಳಿದ್ದಾನೆ.

ಇನ್ನು ಬಾಲಕಿ ಭಾನುವಾರ ರಾತ್ರಿ ತಾಯಿಗೆ ನಡೆದ ವಿಷಯ ಹೇಳಿಕೊಂಡಿದ್ದಾಳೆ. ಕೂಡಲೇ ಪೋಷಕರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

Last Updated : Jul 23, 2019, 2:42 PM IST

ABOUT THE AUTHOR

...view details