ಕೋಲ್ಕತಾ :ತಾಯಿಯ ಕಣ್ಣೆದುರೆ ಮಗ ಪ್ರಾಣಬಿಟ್ಟಿದ್ದು, ಅಂತ್ಯಕ್ರಿಯೆ ಮಾಡದೇ ಮಗನೊಂದಿಗೆ ಮೂರು ದಿನ ಕಳೆದಿರುವ ಮನ ಮಿಡಿಯುವ ಘಟನೆ ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ನಡೆದಿದೆ.
ಮೃತ ಮಗನೊಂದಿಗೆ ಮೂರು ದಿನ ಕಳೆದ ಮಹಾತಾಯಿ.. ಮನ ಕಲುಕಿದ ಘಟನೆ! - ಕೊಲ್ಕತ್ತಾ ಸುದ್ದಿ
ಆ ತಾಯಿಗೆ ಮಗನೇ ಆಸರೆ. ವಿಧಿಯಾಟ ತಾಯಿಯ ಪಕ್ಕದಲ್ಲೇ ಆತ ಸಾವನ್ನಪ್ಪಿದ. ಆದ್ರೂ ಆ ತಾಯಿ ಆತನ ಅಂತ್ಯಕ್ರಿಯೆ ಮಾಡದೇ ಮಗನ ಮೃತ ದೇಹದ ಪಕ್ಕದಲ್ಲೇ ಮೂರು ದಿನ ಕಳೆದಿದ್ದಾಳೆ.
ಇಲ್ಲಿನ ರಾಮಗಢ್ ನಿವಾಸಿ ಸೋಮನಾಥ್ (39) ಮೂರು ದಿನಗಳ ಹಿಂದೆ ತನ್ನ ಹೆತ್ತ ತಾಯಿಯ ಕಣ್ಣೆದುರೆ ಪ್ರಾಣ ಬಿಟ್ಟಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಆ ತಾಯಿಗೆ ಮಗನ ಅಂತ್ಯಕ್ರಿಯೆ ಮಾಡಲಿಲ್ಲ. ನೆಲ ಬಿಟ್ಟು ಮೇಲಕ್ಕೆ ಏಳಲೂ ಆ ತಾಯಿಗೆ ಕಷ್ಟವಾಗಿದೆ. ಬಂಧು-ಬಳಗ ಈ ವೇಳೆ ಯಾರೂ ಮನೆ ಬಳಿ ಸುಳಿದಿಲ್ಲ. ಹೀಗಾಗಿ ಆ ತಾಯಿ ತನ್ನ ಮೃತ ಮಗನ ಪಕ್ಕದಲ್ಲೇ ಮೂರು ದಿನ ಕಾಲ ಕಳೆದಿದ್ದಾರೆ.
ಇನ್ನು ದುರ್ವಾಸನೆ ಬರುತ್ತಿದ್ದರಿಂದ ಸ್ಥಳೀಯರ ಮನೆಯೊಳಗೆ ಹೋಗಿ ನೋಡಿದಾಗ ವಿಷಯ ಗೊತ್ತಾಗಿದೆ. ಕೂಡಲೇ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಪೋಸ್ಟ್ಮಾರ್ಟ್ಗೆ ಕಳುಹಿಸಿ, ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿದರು.