ತೂತುಕುಡಿ : ಒಂಭತ್ತು ತಿಂಗಳು ಹೊತ್ತು ಜನ್ಮ ಕೊಡುವ ತಾಯಿಗೆ ನಾವು ದೇವರ ಸ್ಥಾನಕೊಟ್ಟು ಪೂಜಿಸುತ್ತೇವೆ. ಆದ್ರೆ ಇಲ್ಲೊಬ್ಬ ಮಗ ದಾರುಣವಾಗಿ ವರ್ತಿಸಿದ್ದಾನೆ. ಮೃತ ತಾಯಿಯ ಅಂತ್ಯಕ್ರಿಯೆ ಮಾಡದೇ ಆಕೆಯ ಶವವನ್ನು ಕಸದ ತೊಟ್ಟಿಗೆ ಎಸೆದಿರುವ ದುರಂತವೊಂದು ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ನಡೆದಿದೆ.
ಹೆತ್ತ ತಾಯಿಯ ಶವವನ್ನು ಕಸದ ತೊಟ್ಟಿಗೆ ಎಸೆದ ಪೂಜಾರಿ! ವಿಡಿಯೋ... - ತೂತುಕುಡಿ ಸುದ್ದಿ
ಮಕ್ಕಳನ್ನು ಹೆತ್ತು ಪ್ರೀತಿಯಿಂದ ಸಾಕಿ ಸಲುಹಿ ತನ್ನ ಸಂತೋಷವನ್ನು ಧಾರೆ ಎಳೆಯುವವಳೇ ತಾಯಿ. ಅಂತಾ ತಾಯಿಯನ್ನು ನಾವು ದೇವರ ಸ್ಥಾನದಲ್ಲಿ ಕಾಣುತ್ತೇವೆ. ಆದ್ರೆ ಇಲ್ಲೊಬ್ಬ ದೇವಾಲಯದ ಪೂಜಾರಿ ತನ್ನ ಹೆತ್ತ ತಾಯಿಯ ಶವವನ್ನು ಅಂತ್ಯಕ್ರಿಯೆ ಮಾಡದೇ ಕಸದ ತೊಟ್ಟಿಗೆ ಎಸೆದಿದ್ದಾನೆ.
ಹೆತ್ತ ತಾಯಿಯ ಶವವನ್ನು ಕಸದ ತೊಟ್ಟಿಗೆ ಎಸೆದ ಪೂಜಾರಿ
ಇಲ್ಲಿನ ಧನಸಿಂಗ್ ನಗರದ ನಿವಾಸಿ ಮುತ್ತುಲಕ್ಷಣನ್ ದೇವಸ್ಥಾನದ ಪೂಜಾರಿ. ಸೋಮವಾರ ಬೆಳಗ್ಗೆ ಪೂಜಾರಿ ಮುತ್ತುಲಕ್ಷಣನ್ರ ತಾಯಿಯ ಶವ ಕಸದ ತೊಟ್ಟಿಯಲ್ಲಿ ಕಂಡಿದೆ. ಸ್ಥಳೀಯರು ಪೊಲೀಸರು ಮಾಹಿತಿ ರವಾನಿಸಿದರು. ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.
ಇನ್ನು ಪೂಜಾರಿ ಮುತ್ತುಲಕ್ಷಣನ್ನನ್ನು ಇದರ ಬಗ್ಗೆ ವಿಚಾರಿಸಿದಾಗ, ‘ನಮ್ಮ ತಾಯಿಯ ಅಂತ್ಯಕ್ರಿಯೆ ನಡೆಸಲು ನನ್ನ ಬಳಿ ಹಣವಿಲ್ಲ. ಹೀಗಾಗಿ ಆಕೆಯ ಶವವನ್ನು ಕಸದ ತೊಟ್ಟಿಗೆ ಹಾಕಿದ್ದಾನೆ ಎಂದು ಮುತ್ತುಲಕ್ಷ್ಮಣ್ ಹೇಳಿದ್ದಾನೆ.