ಕರ್ನಾಟಕ

karnataka

ETV Bharat / bharat

ಹೆಂಡ್ತಿ ಜೊತೆ ಜಗಳವಾಡಿ ಟ್ರೇನ್​​​ ನಿಲ್ಲಿಸಿದ ಗಂಡ... ಪ್ರಯಾಣಿಕರು ಸಮಾಧಾನ ಪಡಿಸಿದರೂ ಬಗ್ಗದ ಭೂಪ! - ಬಗ್ಗದ ಭೂಪ

ಕುಡಿದ ಮತ್ತಿನಲ್ಲಿ ಜನ ಏನ್​ ಮಾಡ್ತಾರೇ ಎಂಬುದನ್ನು ಹೇಳೋಕೆ ಸಾಧ್ಯವೇ ಇಲ್ಲ. ಇಲ್ಲೊಬ್ಬ ಭೂಪ ಹೆಂಡ್ತಿಯ ಜೊತೆ ಜಗಳವಾಡಿ ರೈಲನ್ನೇ ನಿಲ್ಲಿಸಿ ಸುದ್ದಿಯಾಗಿದ್ದಾನೆ

ಹೆಂಡ್ತಿ ಜೊತೆ ಜಗಳವಾಡಿ ರೈಲನ್ನೇ ನಿಲ್ಲಿಸಿದ ಗಂಡ

By

Published : May 20, 2019, 4:58 PM IST

ಚೆನ್ನೈ: ಹೆಂಡ್ತಿ ಜೊತೆ ಜಗಳವಾಡಿದ ಗಂಡ ಕುಡಿದ ಮತ್ತಿನಲ್ಲಿ ರೈಲನ್ನೇ ನಿಲ್ಲಿಸಿರುವ ಘಟನೆ ತಮಿಳುನಾಡಿನಲ್ಲಿ ಸಂಚಲನ ಮೂಡಿಸಿದೆ.

ಶಿವಗಂಗೆ ಜಿಲ್ಲೆಯ ಮಾನಮದುರೈ ನಿವಾಸಿ ಷಣ್ಮುಗವೇಲು​ (26) ಶುಕ್ರವಾರ ಹೆಂಡ್ತಿಯ ಜೊತೆ ಜಗಳವಾಡಿ ತನ್ನ ಬೈಕ್​ ಮೂಲಕ ತಿರುಭುವನಂ ಸೇರಿದ್ದಾನೆ. ಲಾಡನೆಂದಲ್​ ರೈಲ್ವೇ ಹಳಿ ಪಕ್ಕ ಕುಡಿದು ಮಲಗಿದ್ದಾನೆ. ಶನಿವಾರ ಬೆಳಗ್ಗೆ ಷಣ್ಮುಗವೇಲು​ ಬೈಕ್ ರೈಲ್ವೇ ಹಳಿಯ ಮೇಲೆ ನಿಲ್ಲಿಸಿ ಅದರ ಮೇಲೆ ಕುಳಿತುಕೊಂಡಿದ್ದಾನೆ.

ಇನ್ನು ಬೆಳಗ್ಗೆ 7.40ಕ್ಕೆ ಮದುರೈನಿಂದ ರಾಮೇಶ್ವರ್​ಗೆ ತೆರಳುತ್ತಿದ್ದ ರೈಲು ಬಂದಿದೆ. ಸ್ವಲ್ಪ ದೂರದಲ್ಲಿ ಹಳಿಗಳ ಮೇಲೆ ಬೈಕ್​ ಮತ್ತು ಷಣ್ಮುಗ ಇರುವುದನ್ನು ಗಮನಿಸಿದ ಚಾಲಕ ಟ್ರೇನ್​ಗೆ ಬ್ರೇಕ್​ ಹಾಕಿ ನಿಲ್ಲಿಸಿದ್ದಾರೆ. ಇದ್ದಕ್ಕಿದ್ದಂತೆ ಟ್ರೇನ್​ ನಿಂತಿದ್ದರಿಂದ ಕೆಳಗಿಳಿದ ಪ್ರಯಾಣಿಕರು ಷಣ್ಮುಗವೇಲ್​ನನ್ನು ಯಾಕಪ್ಪ ಹೀಗೆ ಹಳಿ ಮೇಲೆ ಬೈಕ್ ಏರಿ ಕುಳಿತ್ತಿದ್ದೀಯಾ ಎಂದು ವಿಚಾರಿಸಿದ್ದಾರೆ. ಅಷ್ಟೇ ಅಲ್ಲ ಆತನನ್ನು ಸಮಾಧಾನಪಡಿಸಲು ಮುಂದಾಗಿದ್ದಾರೆ. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ.

ಈ ಸುದ್ದಿ ರೈಲ್ವೇ ಪೊಲೀಸರಿಗೂ ಗೊತ್ತಾಗಿ, ಸ್ಥಳಕ್ಕೆ ದೌಡಿಯಿಸಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಷಣ್ಮುಗವೇಲು​ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಘಟನೆಯಿಂದ ರೈಲು ಅರ್ಧ ಗಂಟೆಗೂ ಹೆಚ್ಚು ಕಾಲ ತಡವಾಗಿ ಚಲಿಸಿದೆ. ಮಾನಮದುರೈ ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಷಣ್ಮುಗವೇಲು ಬಂಧನಕ್ಕೆ ಹುಡುಕಾಟ ನಡೆಸಿದ್ದಾರೆ.

ABOUT THE AUTHOR

...view details