ನವದೆಹಲಿ : ಇತ್ತೀಚೆಗಷ್ಟೆ ಬಿಜೆಪಿ ಸೇರಿದ ವಿಶೇಷ ಸೇನಾ ಪಡೆಯ ಮಾಜಿ ಯೋಧ, ಕಾಂಗ್ರೆಸ್ನ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸುವ ಮನದ ಇಂಗಿತ ವ್ಯಕ್ತಪಡಿಸಿದ್ದಾರೆ.
ಮಾಜಿ ಯೋಧ ಮೇಜರ್ ಸುರೇಂದ್ರ ಪೂನೈ, ರಾಯ್ಬರೇಲಿ ಕ್ಷೇತ್ರದಲ್ಲಿ ಸೋನಿಯಾ ಎದುರು ಸ್ಪರ್ಧಿಸಲು ನರೇಂದ್ರ ಮೋದಿ ನನಗೇನಾದರೂ ಸೂಚಿಸಿದರೆ ಹೆಮ್ಮೆ ಪಡುತ್ತೇನೆ. ಈ ಸ್ಪರ್ಧೆ ಚೌಕೀದಾರ್ ಹಾಗೂ ಚೋರ್ ನಡುವೆ ನಡೆಯುವ ಸ್ಪರ್ಧೆಯಾಗಿರುತ್ತದೆ ಎಂದು ಹೇಳಿಕೊಂಡಿದ್ದಾರೆ.
ಪ್ರಧಾನಿ ಮೋದಿ ಅವರು ನಾಯಕತ್ವ ಗುಣದಿಂದ ಬಿಜೆಪಿಗೆ ಸೇರ್ಪೆಡೆಯಾದೆನೆಂದು ಹೇಳಿದ್ದಾರೆ. ಮೋದಿ ಸದಾ ರಾಷ್ಟ್ರೀಯತೆ ಹಾಗೂ ರಾಷ್ಟ್ರದ ಭದ್ರತೆಗೆ ಆದ್ಯತೆ ನೀಡುತ್ತಾರೆ. ಭದ್ರತಾ ಪಡೆಯನ್ನು ಅತೀವವಾಗಿ ಗೌರವಿಸುತ್ತಾರೆ. ಈ ಕಾರಣದಿಂದ ಬಿಜೆಪಿ ಸೇರಿ ದೇಶಕ್ಕೆ ಸೇವೆ ಮಾಡುವ ಆಸೆ ಹೊಂದಿದ್ದೇನೆ ಎಂದಿದ್ದಾರೆ.
2014ರ ಚುನಾವಣೆಯಲ್ಲಿಯೂ ಅವರು ರಾಜಸ್ಥಾನದ ಸಿಕಾರ್ನಿಂದ ಸ್ಪರ್ಧಿಸಿದ್ದರು. 2004ರಿಂದಲೂ ರಾಯ್ಬರೇಲಿಯಲ್ಲಿ ಸೋನಿಯಾ ಪ್ರಾಬಲ್ಯ ಹೊಂದಿದ್ದಾರೆ. ಸೋನಿಯಾ ವಿರುದ್ಧ ಸ್ಪರ್ಧಿಸಬೇಕೆಂಬುದು ಈ ಮಾಜಿ ಯೋಧನ ಆಶಯವಾಗಿದೆ.