ಕರ್ನಾಟಕ

karnataka

ETV Bharat / bharat

ತಾಯಿಗೆ ಬೆಂಬಲ ಸೂಚಿಸಿದ್ದೇ ತಪ್ಪಾಯ್ತು... ಊಟ ಮಾಡುತ್ತಿದ್ದ ಮಗಳನ್ನು ಕೊಲೆಗೈದ ಪಾಪಿ ತಂದೆ! - ಪಾಪಿ ತಂದೆ

ತಂದೆ ಜಗಳವಾಡುತ್ತಿದ್ದ ಸಂದರ್ಭದಲ್ಲಿ ತಾಯಿಗೆ ಬೆಂಬಲ ಸೂಚಿಸಿದ್ದಕ್ಕೆ ಊಟ ಮಾಡುತ್ತಿದ್ದ ಹೆತ್ತ ಮಗಳನ್ನು ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ತಾಯಿಗೆ ಬೆಂಬಲ

By

Published : Apr 18, 2019, 12:34 PM IST

ನೆಲ್ಲೂರು: ತಂದೆಯೊಬ್ಬ ಕುಡಿದ ಮತ್ತಿನಲ್ಲಿ ಊಟ ಮಾಡುತ್ತಿದ್ದ ಮಗಳನ್ನು ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ನಡೆದಿದೆ.

ಇಲ್ಲಿನ ಗೊಟ್ಟಿಗುಂಡಾಲ ಗ್ರಾಮದ ನಿವಾಸಿ ರೋಶಯ್ಯ ನಿತ್ಯ ಕುಡಿದು ಹೆಂಡ್ತಿ ಚೆನ್ನಮ್ಮನ ಜೊತೆ ಜಗಳವಾಡುತ್ತಿದ್ದನು. ಈ ದಂಪತಿಗೆ ಮೂವರು ಹೆಣ್ಮಕ್ಕಳು ಮತ್ತು ಒಂದು ಗಂಡು ಮಗುವಿದೆ.

ಇನ್ನು ಎರಡನೇ ಮಗಳು ಹೇಮಲತಾ ವಿಂಜಮೂರು ತಾಲೂಕಿನ ಖಾಸಗಿ ಕಾಲೇಜ್​ನಲ್ಲಿ ಡಿಗ್ರಿ ಎರಡನೇ ವರ್ಷ ವ್ಯಾಸಂಗ ಮಾಡುತ್ತಿದ್ದರು. ತಂದೆ ಜಗಳವಾಡುತ್ತಿದ್ದ ವೇಳೆ ಹೇಮಲತಾ ತನ್ನ ತಾಯಿಗೆ ಬೆಂಬಲ ಸೂಚಿಸುತ್ತಿಳು. ಬುಧವಾರ ಸಹೋದರಿ ಮತ್ತು ತಾಯಿ ಕೆಲಸಕ್ಕಾಗಿ ಹೊಲಕ್ಕೆ ತೆರಳಿದಾಗ ಹೇಮಲತಾ ಮನೆಯಲ್ಲೇ ಇದ್ದಳು.

ಈ ವೇಳೆ ಕುಡಿದ ಮತ್ತಿನಲ್ಲಿ ಮನೆಗೆ ಬಂದ ತಂದೆ ರೋಶಯ್ಯ ಮಗಳು ಹೇಮಲತಾಳೊಂದಿಗೆ ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದ್ದು, ವನಕೆಯಿಂದ ಊಟ ಮಾಡುತ್ತಿದ್ದ ಮಗಳ ತಲೆಗೆ ಹೊಡೆದಿದ್ದಾನೆ. ಹೇಮಲತಾ ತಲೆಗೆ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ರಕ್ತಸ್ರಾವವಾಗಿ ಮೃತಪಟ್ಟಳು.

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details