ಕರ್ನಾಟಕ

karnataka

ETV Bharat / bharat

ವಿವಾಹ ಕಾರ್ಯಕ್ರಮದಲ್ಲಿ ನೃತ್ಯ ಮಾಡುವುದನ್ನು ನಿಲ್ಲಿಸಿದ್ದಕ್ಕೆ ನರ್ತಕಿ ಮುಖಕ್ಕೆ ಗುಂಡೇಟು! ವಿಡಿಯೋ

ಡಿಸೆಂಬರ್​ 1 ರಂದು ನಡೆಯುತ್ತಿದ್ದ ಮದುವೆ ಸಮಾರಂಭವೊಂದರಲ್ಲಿ ವೇದಿಕೆ ಮೇಲೆ ಡ್ಯಾನ್ಸ್​ ಮಾಡುತ್ತಿದ್ದ ಯುವತಿ, ನೃತ್ಯ ಮಾಡುವುದನ್ನು ನಿಲ್ಲಿಸಿದಕ್ಕೆ ನರ್ತಕಿ ಮುಖಕ್ಕೆ ಗುಂಡು ಹಾರಿಸಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟ್​​ನ ಟಿಕ್ರಾ ಗ್ರಾಮದಲ್ಲಿ ನಡೆದಿದೆ.

woman shot in face
ನರ್ತಕಿ ಮುಖಕ್ಕೆ ಗುಂಡೇಟು

By

Published : Dec 6, 2019, 6:53 PM IST

ಚಿತ್ರಕೂಟ್​ (ಉತ್ತರ ಪ್ರದೇಶ): ವಿವಾಹ ಕಾರ್ಯಕ್ರಮವೊಂದರಲ್ಲಿ ನೃತ್ಯ ಮಾಡುವುದನ್ನು ನಿಲ್ಲಿಸಿದ್ದಕ್ಕೆ ನರ್ತಕಿ ಮುಖಕ್ಕೆ ಗುಂಡು ಹಾರಿಸಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಚಿತ್ರಕೂಟ್​​ನ ಟಿಕ್ರಾ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ವಿವಾಹ ಕಾರ್ಯಕ್ರಮದಲ್ಲಿ ನೃತ್ಯ ಮಾಡುವುದನ್ನು ನಿಲ್ಲಿಸಿದ್ದಕ್ಕೆ ನರ್ತಕಿ ಮುಖಕ್ಕೆ ಗುಂಡೇಟು

ಡಿಸೆಂಬರ್​ 1 ರಂದು ನಡೆಯುತ್ತಿದ್ದ ಮದುವೆ ಸಮಾರಂಭವೊಂದರಲ್ಲಿ ವೇದಿಕೆ ಮೇಲೆ ಡ್ಯಾನ್ಸ್​ ಮಾಡುತ್ತಿದ್ದ ಯುವತಿ, ನೃತ್ಯ ಮಾಡುವುದನ್ನು ನಿಲ್ಲಿಸಿದಕ್ಕೆ ಗ್ರಾಮದ ಮುಖ್ಯಸ್ಥನ ಸಂಬಂಧಿ ಅಜಿತ್ ಸಿಂಗ್ ಎಂಬವರು ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದೆ. ನೃತ್ಯಗಾರ್ತಿಯನ್ನು ಹಿನಾ ಎಂದು ಗುರುತಿಸಲಾಗಿದ್ದು, ಕಾನ್ಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಘಟನೆಯಲ್ಲಿ ನರ್ತಕಿ ಸೇರಿ ಮೂವರಿಗೆ ಗಾಯಗಳಾಗಿವೆ.

ಘಟನೆಯ ವಿಡಿಯೋ ಒಂದು ವೈರಲ್​ ಆಗಿದ್ದು, ಈ ವಿಡಿಯೋದಲ್ಲಿ ಇಬ್ಬರು ಯುವತಿಯರು ನೃತ್ಯ ಮಾಡುತ್ತಿರುವ ದೃಶ್ಯ, ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಡ್ಯಾನ್ಸ್ ನಿಲ್ಲಿಸಿದರೆ ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಿರುವ ಧ್ವನಿ ಹಾಗೂ ಇನ್ನೊಬ್ಬ ವ್ಯಕ್ತಿ 'ಗುಂಡು ಹಾರಿಸಿ ಬಯ್ಯಾ' ಎಂದು ಹೇಳುವ ಧ್ವನಿ ಹಾಗೂ ಒಬ್ಬ ಯುವತಿಯ ಮುಖಕ್ಕೆ ಗುಂಡು ಹಾರಿಸಿರುವ ದೃಶ್ಯ ಸೆರೆಯಾಗಿದೆ.

ಆರೋಪಿಯು ಕೌಶಂಬಿ ಜಿಲ್ಲೆಯ ರಾಣಿಪುರ ಗ್ರಾಮದ ನಿವಾಸಿ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಎಫ್​ಐಆರ್​ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಲು ಎರಡು ತನಿಖಾ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಂಕಿತ್‌ ಮಿತ್ತಲ್‌ ತಿಳಿಸಿದ್ದಾರೆ.

ABOUT THE AUTHOR

...view details